ಮಹಿಳೆಯರು ತೊಡುವ ಬಟ್ಟೆ, ಉಡುಗೆ-ತೊಡುಗೆ ಪುರುಷರಿಗೆ ಪ್ರಚೋದನೆ ನೀಡುತ್ತವೆ ಇದರಿಂದಾಗಿ ಇಂತಹ ಘಟನೆಗಳು ನಡೆಯುತ್ತವೆ ಎಂದು ಅವರು ಹೇಳಿದ್ದಾರೆ. ಸಾಂಸ್ಕೃತಿಕ ಅಧಃಪತನವೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣ ಅಂತಾ ಮಾತೆ ಮಹಾದೇವಿ ಹೇಳಿದ್ದಾರೆ. ಅಲ್ಲದೇ, ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿಗೊಳಿಸುವಂತೆ ಸರಕಾರಕ್ಕೆ ಮಾತೆ ಮಹಾದೇವಿ ಸಲಹೆ ನೀಡಿದ್ದಾರೆ.
ಧಾರವಾಡ(ಜ.07): ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಆ ಮಹಿಳೆಯರು ಪ್ರಚೋದನಾತ್ಮಕವಾಗಿ ಉಡುಪು ಧರಿಸುವುದೇ ಕಾರಣ ಎಂದು ಕೂಡಲ ಸಂಗಮದ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.