Asianet Suvarna News Asianet Suvarna News

ಗೋವಿಗಿಂತ ಮನುಷ್ಯ ಜೀವನ ಹೆಚ್ಚು ಪವಿತ್ರ: ರಾಮ್ ಮಾಧವ್

ಗೋರಕ್ಷಣೆ ಹೆಸರಿನಲ್ಲಿ ಮನುಷ್ಯರನ್ನು ಥಳಿಸಿ ಕೊಲ್ಲುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರೆಸ್ಸೆಸ್ ಮುಖಂಡ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಗೋವನ್ನು ರಕ್ಷಿಸಲು ಮನುಷ್ಯರನ್ನು ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲವೆಂದಿದ್ದಾರೆ.

Lynching in name of protecting something not acceptable Says Ram Madhav

ಬೆಂಗಳೂರು (ಜು. 09): ಗೋರಕ್ಷಣೆ ಹೆಸರಿನಲ್ಲಿ ಮನುಷ್ಯರನ್ನು ಥಳಿಸಿ ಕೊಲ್ಲುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರೆಸ್ಸೆಸ್ ಮುಖಂಡ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಗೋವನ್ನು ರಕ್ಷಿಸಲು ಮನುಷ್ಯರನ್ನು ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲವೆಂದಿದ್ದಾರೆ.

ಒಂದನ್ನು ರಕ್ಷಿಸಲು ಇನ್ನೊಂದನ್ನು ಹತ್ಯೆಗೈಯುವುದು ಸಲ್ಲದು. ಗೋರಕ್ಷಣೆ ಪವಿತ್ರ ಕಾರ್ಯ, ಆದರೆ ಮನುಷ್ಯ ಜೀವನ ಇನ್ನೂ ಪವಿತ್ರವಾದುದ್ದು.  ಪವಿತ್ರ ಕಾರ್ಯದ ಹೆಸರಿನಲ್ಲಿ ಜೀವನದ ಪಾವಿತ್ರ್ಯತೆಯನ್ನು ಹಾಳುಗೆಡಹಬಾರದು, ಎಂದು ರಾಮ್ ಮಾಧವ್ ಹೇಳಿದ್ದಾರೆ.

ಗೋರಕ್ಷಣೆ ಹೆಸರಿನಲ್ಲಿ ಜನರನ್ನು ಕೊಲ್ಲುವುದರಲ್ಲಿ ಪವಿತ್ರವಾದುದು ಏನು ಇಲ್ಲ, ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಗೋರಕ್ಷಣೆಯ ಹೆಸರಿನಲ್ಲಿ ಗುಂಪುಗಳು ಜನರನ್ನು ಥಳಿಸಿ ಹತ್ಯೆಗೈಯುತ್ತಿರುವ ಬಗ್ಗೆ ಪ್ರಧಾನಿ ಮೋದಿ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು.

Follow Us:
Download App:
  • android
  • ios