Asianet Suvarna News Asianet Suvarna News

ಎಲ್ಪಿಜಿ ಸಿಲಿಂಡರ್'ನಲ್ಲಿ ಭಾರಿ ಏರಿಕೆ :ಮುಂದಿನ ವರ್ಷ ಸಬ್ಸಿಡಿ ರದ್ದು

ಪ್ರತಿ ತಿಂಗಳು ಅಡುಗೆ ಅನಿಲದ ದರವನ್ನು 4 ರು. ನಂತೆ ಏರಿಕೆ ಮಾಡಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜು.31ರಂದು ಪ್ರಕಟಿಸಿದ್ದರು

LPG is now costlier by Rs 7 per cylinder aviation fuel by 4 percent

ನವದೆಹಲಿ(ಆ.01): ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್ ಬಳಕೆದಾರರಿಗೆ  ಏರಿಕೆಯ ಬಿಸಿ ಮುಟ್ಟಿಸಿದೆ. ಪ್ರತಿ ತಿಂಗಳು ಸಬ್ಸಿಡಿ ಸಿಲಿಂಡರ್ ದರ ಏರಿಸುವ ಸರ್ಕಾರದ ನಿರ್ಧಾರದ ಭಾಗವಾಗಿ ಸೆ. 1 ರಂದು ಪ್ರತಿ ಎಲ್‌ಪಿಜಿ ಸಿಲಿಂಡರ್ ದರವನ್ನು 7 ರೂ. ಏರಿಸಲಾಗಿದೆ. ಇದರಿಂದ ಸಬ್ಸಿಡಿ ಸಿಲಿಂಡರ್ ದರ ಬೆಂಗಳೂರಿನಲ್ಲಿ 485.50 ರೂ.ನಿಂದ 492.50 ರೂ.ಗಳಿಗೆ ಏರಿಕೆಯಾಗಿದೆ.

ಈ ವರ್ಷದ ಅಂತ್ಯದೊಳಗೆ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಉದ್ದೇಶದಿಂದ ಪ್ರತಿ ತಿಂಗಳು ಅಡುಗೆ ಅನಿಲದ ದರವನ್ನು 4 ರು. ನಂತೆ ಏರಿಕೆ ಮಾಡಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜು.31ರಂದು ಪ್ರಕಟಿಸಿದ್ದರು. ಆದರೆ ಆಗಸ್ಟ್ ತಿಂಗಳಲ್ಲಿ ನಿಗದಿಗಿಂತ ಕಡಿಮೆ ಹೆಚ್ಚಳ ಮಾಡಿದ್ದ ಹಿನ್ನೆಲೆಯಲ್ಲಿ ಹಳೆಯ ಬಾಕಿ ಸೇರಿಸಿ ಇದೀಗ ಒಟ್ಟಾರೆ 7 ರು. ಏರಿಕೆ ಮಾಡಲಾಗಿದೆ.

ವರ್ಷದಲ್ಲಿ 68 ರೂ. ಏರಿಕೆ

2017ರ ಜೂನ್‌ನಿಂದ ಪ್ರತಿ ತಿಂಗಳು ಸಬ್ಸಿಡಿ ಸಿಲಿಂಡರ್ ದರವನ್ನು 2 ರು. ಏರಿಸಲಾಗುತ್ತಿದೆ. ಆದರೆ 2018ರ ಮಾರ್ಚ್‌ನೊಳಗೆ ಪೂರ್ಣ ಸಬ್ಸಿಡಿ ತೆಗೆದು ಹಾಕುವ ನಿಟ್ಟಿನಲ್ಲಿ ಕಳೆದ ಜೂನ್ 1ರಿಂದ ಏರಿಕೆ ಪ್ರಮಾಣವನ್ನು 4 ರೂ.ಗೆ ಹೆಚ್ಚಿಸಲಾಗಿದೆ. ಈ ದರಕ್ಕೆ ಸ್ಥಳೀಯ ತೆರಿಗೆಯನ್ನೂ ಸೇರಿಸಿದರೆ ಕಳೆದ ಒಂದು ವರ್ಷದಿಂದ ಎಲ್‌ಪಿಜಿ ಸಿಲಿಂಡರ್ ಬೆಲೆ 68 ರೂ.ನಷ್ಟು ಭಾರೀ ಪ್ರಮಾಣದಲ್ಲಿ ಹೆಚ್ಚಳವಾದಂತಾಗಿದೆ. ಇದೇ ವೇಳೆ ಸಬ್ಸಿಡಿ ರಹಿತ ಎಲ್‌ಪಿಜಿ ದರ ಕೂಡ 73.5 ರು. ಏರಿಕೆಯಾಗಿದ್ದು, 598.50 ರೂ. ಆಗಿದೆ.

Follow Us:
Download App:
  • android
  • ios