ಗ್ರಾಹಕರು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಅಡುಗೆ ಅನಿಲವನ್ನು ಬುಕ್ ಮಾಡಬಹುದಾಗಿದೆ.

ನವದೆಹಲಿ(ಡಿ.03): ಎಲ್‌'ಪಿಜಿ ಸಿಲಿಂಡರ್ ಖರೀದಿ ಅಥವಾ ಮಾರಾಟದ ಪಾವತಿಯನ್ನು ಆನ್‌'ಲೈನ್ ಮೂಲಕ ಮಾಡಿದರೆ ಇನ್ನು ಮುಂದೆ ₹5 ರಿಯಾಯಿತಿ ಸಿಗಲಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಈ ಬಗ್ಗೆ ಘೋಷಣೆ ಹೊರಡಿಸಿದ್ದು, ಯಾರು ಆನ್‌'ಲೈನ್‌'ನಲ್ಲೇ ಎಲ್‌ಪಿಜಿ ಬುಕ್ ಮಾಡಿ, ಪಾವತಿಸುತ್ತಾರೋ ಅವರಿಗೆ ₹5 ಕಡಿತ ಮಾಡುವುದಾಗಿ ತಿಳಿಸಿವೆ.

ನಗದುರಹಿತ ವಹಿವಾಟು ಉತ್ತೇಜಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು, ಡೀಸೆಲ್ ಮತ್ತು ಪೆಟ್ರೋಲ್ ಖರೀದಿ ವೇಳೆ ಶೇ.0.75ರಷ್ಟು ವಿನಾಯಿತಿ ನೀಡುವಂತೆ ಸೂಚಿಸಿತ್ತು. ಈಗ ಇದನ್ನು ಎಲ್‌'ಪಿಜಿಗೂ ವಿಸ್ತರಿಸಲಾಗಿದೆ. ಗ್ರಾಹಕರು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಅಡುಗೆ ಅನಿಲವನ್ನು ಬುಕ್ ಮಾಡಬಹುದಾಗಿದೆ.