ಆಕೆ ತಾಯಿ ಇಲ್ಲದ ತಬ್ಬಲಿ, ತಾಯಿ ಇಲ್ಲದ ಆಕೆಗೆ ತಾಯಿ ಪ್ರೀತಿ ಕೊಡ್ತೀನಿ ಅಂತ ಆತ ಬಂದಿದ್ದ. ಅವರಿಬ್ಬರು ಪ್ರೀತಿಯ ಕಡಲಲ್ಲಿ ತೇಲುತ್ತಿದ್ದರು. ಆತನಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ್ದಳು ಆಕೆ. ಆದರೆ ಎಲ್ಲಾ ಮುಗಿಸಿದ್ದ ಕಿಲಾಡಿ ಗೆಳೆಯ, ಇದೀಗ ಉಲ್ಟಾ ಹೊಡೆಯುತ್ತಿದ್ದಾನೆ. ಇದ್ಯಾವ ಸಿನಿಮಾ ಕತೆ ಅಂಥಿರಾ? ಹಾಗಾದ್ರೆ ಈ ಸ್ಟೋರಿ ಓದಿ, ನಿಮಗೇ ಗೊತ್ತಾಗುತ್ತದೆ.
ಬೆಂಗಳೂರು(ಎ.11): ಆಕೆ ತಾಯಿ ಇಲ್ಲದ ತಬ್ಬಲಿ, ತಾಯಿ ಇಲ್ಲದ ಆಕೆಗೆ ತಾಯಿ ಪ್ರೀತಿ ಕೊಡ್ತೀನಿ ಅಂತ ಆತ ಬಂದಿದ್ದ. ಅವರಿಬ್ಬರು ಪ್ರೀತಿಯ ಕಡಲಲ್ಲಿ ತೇಲುತ್ತಿದ್ದರು. ಆತನಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ್ದಳು ಆಕೆ. ಆದರೆ ಎಲ್ಲಾ ಮುಗಿಸಿದ್ದ ಕಿಲಾಡಿ ಗೆಳೆಯ, ಇದೀಗ ಉಲ್ಟಾ ಹೊಡೆಯುತ್ತಿದ್ದಾನೆ. ಇದ್ಯಾವ ಸಿನಿಮಾ ಕತೆ ಅಂಥಿರಾ? ಹಾಗಾದ್ರೆ ಈ ಸ್ಟೋರಿ ಓದಿ, ನಿಮಗೇ ಗೊತ್ತಾಗುತ್ತದೆ.
ಮೂಲತಃ ಚಿಕ್ಕಮಗಳೂರಿನ ದರ್ಶನ್, ಕಳೆದ 3 ವರ್ಷಗಳ ಹಿಂದೆ ಮಾಯಾನಗರಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ. ಮುರುಗೇಶಪಾಳ್ಯದಲ್ಲಿ ಓಮೇಘಾ ಹೆಲ್ತ್ ಕೇರ್ ಎನ್ನುವ ಕಂಪನಿಯಲ್ಲಿ ಕೆಲಸವನ್ನೂ ಮಾಡಿಕೊಂಡಿದ್ದ. ಅಲ್ಲೇ ಈಕೆಯ ಪರಿಚಯವಾಗಿ ಪ್ರೀತಿಯೂ ಶುರುವಾಗಿದೆ. ಆಮೇಲೆ ದೈಹಿಕ ಸಂಪರ್ಕವೂ ಏರ್ಪಟ್ಟು ಗಂಡ-ಹೆಂಡತಿಯಂತೆ ನಡೆದುಕೊಂಡಿದ್ದರು. ಈಗ ಉಂಡು ಹೋದ, ಕೊಂಡೂ ಹೋದ ಎನ್ನುವ ಹಾಗೆ ಎಲ್ಲಾ ಮುಗಿಸಿರುವ ಹಾಗೆ ದರ್ಶನ್ ಯುವತಿಗೆ ಕೈ ಕೊಟ್ಟಿದ್ದಾನೆ.
ಇನ್ನು ಈಕೆ ತಾಯಿಯಿಲ್ಲದ ತಬ್ಬಲಿ. ಅಪ್ಪನ ಜೊತೆ ಆರ್ ಟಿ ನಗರದಲ್ಲಿ ವಾಸವಾಗಿದ್ದರು. ಆರು ತಿಂಗಳಿಂದಲೂ ದರ್ಶನ್ ತನ್ನ ಫೋನ್ ಅನ್ನು ಸ್ವಿಚ್ಟ್ ಆಫ್ ಮಾಡಿಕೊಂಡಿದ್ದಾನೆ. ಸಂಪರ್ಕಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗಿಲ್ಲ. ಇದೀಗ ನೊಂದ ಯುವತಿ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಅದೇನೇ ಇದ್ದರೂ, ಪ್ರೀತಿ ಮಾಡಿದ ತಪ್ಪಿಗೆ ಯುವತಿ ಇದೀಗ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಸತ್ಯಾಸತ್ಯತೆ ಪರಿಶೀಲಿಸಿ ಈಕೆಗೆ ನ್ಯಾಯ ಕೊಡಿಸೋ ಜವಾಬ್ದಾರಿ ಆರ್ ಟಿ ನಗರ ಪೊಲೀಸರ ಮೇಲಿದೆ.
