ಇನ್ನು ಲಾರಿಯಲ್ಲಿ ಹಳೆಯ ನೋಟುಗಳಿದ್ದ ಪೆಟ್ಟಿಗೆಗಳು ಸುರಕ್ಷಿತವಾಗಿದ್ದು, ಅದರ ಸುತ್ತಲೂ ಇರಿಸಿದ್ದ ಕಾಗದಗಳು ಮಾತ್ರ ಚೆಲ್ಲಾಪಿಲ್ಲಿಯಾಗಿವೆ‌. ಒಟ್ಟು ಒಂಬತ್ತು ಲಾರಿಗಳಲ್ಲಿ  ಹಳೆಯ ನೋಟುಗಳನ್ನ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ರಾಯಚೂರು (ನ.14): ಮೈಸೂರಿನ ನೋಟು ಮುದ್ರಣ ಕೇಂದ್ರಕ್ಕೆ ಸೇರಿದ ಲಾರಿ ಪಲ್ಟಿಯಾಗಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಮಸ್ಕಿ ಬಳಿ ನಡೆದಿದೆ.

ನಿರುಪಯುಕ್ತ ಪೇಪರ್​, ಹರಿದ ನೋಟುಗಳನ್ನು ಮೈಸೂರಿನಿಂದ ಕಲಬುರ್ಗಿಗೆ ಸಾಗಿಸಲಾಗ್ತಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲಿ ಪಲ್ಟಿಯಾಗಿದೆ.

ಇನ್ನು ಲಾರಿಯಲ್ಲಿ ಹಳೆಯ ನೋಟುಗಳಿದ್ದ ಪೆಟ್ಟಿಗೆಗಳು ಸುರಕ್ಷಿತವಾಗಿದ್ದು, ಅದರ ಸುತ್ತಲೂ ಇರಿಸಿದ್ದ ಕಾಗದಗಳು ಮಾತ್ರ ಚೆಲ್ಲಾಪಿಲ್ಲಿಯಾಗಿವೆ‌. ಒಟ್ಟು ಒಂಬತ್ತು ಲಾರಿಗಳಲ್ಲಿ ಹಳೆಯ ನೋಟುಗಳನ್ನ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ತುರುವಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.