ಲಾಲೂ ಪುತ್ರನ ಮದುವೆಯಲ್ಲಿ ಆಹಾರ ಪದಾರ್ಥಗಳ ಲೂಟಿ

loots food at Tej Pratap Yadav-Aishwarya Rai's wedding
Highlights

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಅವರು ಐಶ್ವರ್ಯಾ ರೈ ಎಂಬುವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ವಿವಾಹಕ್ಕೆ ಬಂದಿದ್ದ ಕೆಲ ಗುಂಪು ಆಹಾರ ಪದಾರ್ಥಗಳು ಮತ್ತು ಪಾತ್ರೆ ಹಾಗೂ ಪಗಾಡೆಗಳನ್ನು ಲೂಟಿಗೈದು ಪರಾರಿಯಾಗಿದ್ದಾರೆ.

ಪಟನಾ(13) : ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಅವರು ಐಶ್ವರ್ಯಾ ರೈ ಎಂಬುವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಆದರೆ, ವಿವಾಹಕ್ಕೆ ಬಂದಿದ್ದ ಕೆಲ ಗುಂಪು ಆಹಾರ ಪದಾರ್ಥಗಳು ಮತ್ತು ಪಾತ್ರೆ ಹಾಗೂ ಪಗಾಡೆಗಳನ್ನು ಲೂಟಿಗೈದು ಪರಾರಿಯಾಗಿದ್ದಾರೆ.

ತೇಜ್ ಪ್ರತಾಪ್ ಮತ್ತು ಐಶ್ವರ್ಯಾ ಹೂಮಾಲೆಯನ್ನು ಬದಲಾಯಿಸಿಕೊಂಡರು. ಇದಾದ ಬೆನ್ನಲ್ಲೇ ಆರ್‌ಜೆಡಿ ಕಾರ್ಯಕರ್ತರು ಆಹಾರ ಪದಾರ್ಥಗಳು ಇತರೆ ಪದಾರ್ಥಗಳನ್ನು ಲಪಟಾಯಿಸಿದ್ದಾರೆ. ಈ ವೇಳೆ ಪತ್ರಕರ್ತರ ಕ್ಯಾಮೆರಾ ಸೇರಿ ಇತರ ಸಲಕರಣೆಗಳು ಹಾನಿಯಾಗಿ

ಈ ವಿವಾಹ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಅಲ್ಲದೇ  ಗಣ್ಯಾತಿಗಣ್ಯರು ಪಾಲ್ಗೊಂಡಿದ್ದು,  ವಿವಾಹ ಸಮಾರಂಭ ನಡೆಯುತ್ತಿದ್ದಂತೆ ಇತ್ತ ಆಹಾರ, ವಿವಿಧ ಸಾಮಾಗ್ರಿಗಳ ಲೂಟಿ ಮಾಡಲಾಗಿದೆ. 

loader