ಕಿರಣ್ ಬೇಡಿಯ ಭಾಷಣವನ್ನು ಅನುವಾದಿಸಿದ್ದು ಯಾರು ಗೊತ್ತೆ ?

Look who is translating Kiran Bedis speech
Highlights

ತಕ್ಷಣ ಜಾಗೃತಗೊಂಡ ಬೇಡಿ ಅವರು ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರ ನೆರವು ಕೋರಿದರು. ಪುದುಚೆರಿ ಸಿಎಂ ಬಹುಭಾಷ ಪಂಡಿತರು. ರಾಜಕೀಯ ವಿರಸ ಮರೆತು ಅನುವಾದ ಮಾಡಲು ಶುರು ಮಾಡಿದರು. ಬೇರೆ ಏನನ್ನು ಹೇಳಬೇಡಿ ತಾನು ಏನು ಹೇಳುತ್ತೀನೋ ಅದನ್ನು ಮಾತ್ರ ತರ್ಜುಮೆ ಮಾಡಿ ಎಂದು ಎಚ್ಚರಿಸಿದಾಗ ಜೋರಾಗಿ ನಕ್ಕು ಸಮ್ಮತಿ ಸೂಚಿಸಿದರು. 

ಪುದುಚೆರಿ(ಮೇ.11): ಕೆಲವು ತಿಂಗಳುಗಳಿಂದ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಅಲ್ಲಿನ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರಿಗೂ ಮನಸ್ಥಾಪ ನಡೆಯುತ್ತಿದೆ. ಇದು ಹಲವು ಘಟನೆಗೂ ಕಾರಣವಾಗಿದೆ.
ಆದರೆ ನಿನ್ನೆ ವಿರಸಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಸ್ಥಳೀಯ ಸಮಾರಂಭವೊಂದರಲ್ಲಿ ಇಬ್ಬರೂ ಮುಖಂಡರು ಪಾಲ್ಗೊಂಡಿದ್ದರು. ಮೂಲತಃ ಕಿರಣ್ ಬೇಟಿ ಅವರು ಉತ್ತರ ಭಾರತದವರು. ಅವರಿಗೆ ಹಿಂದಿ ಹಾಗೂ ಇಂಗ್ಲಿಷ್ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಪುದುಚೆರಿ ರಾಜ್ಯದ ಸ್ಥಳೀಯ ಭಾಷೆ ಬಹುತೇಕ ತಮಿಳು. ಇಂಗ್ಲಿಷ್'ನಲ್ಲಿ ಭಾಷಣ ಆರಂಭಿಸಿದ ಅವರು ಮಾತುಗಳನ್ನು ತಮಿಳಿಗೆ ಅನುವಾದಿಸಲು ಶಿಕ್ಷಣ ಸಚಿವ ಆರ್.ಕಮಲಕೃಷ್ಣನ್ ಅವರಿಗೆ ಸೂಚಿಸಿದರು. ಅವರು ತಾವು ಅನುವಾದಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. 
ತಕ್ಷಣ ಜಾಗೃತಗೊಂಡ ಬೇಡಿ ಅವರು ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರ ನೆರವು ಕೋರಿದರು. ಪುದುಚೆರಿ ಸಿಎಂ ಬಹುಭಾಷ ಪಂಡಿತರು. ರಾಜಕೀಯ ವಿರಸ ಮರೆತು ಅನುವಾದ ಮಾಡಲು ಶುರು ಮಾಡಿದರು. ಬೇರೆ ಏನನ್ನು ಹೇಳಬೇಡಿ ತಾನು ಏನು ಹೇಳುತ್ತೀನೋ ಅದನ್ನು ಮಾತ್ರ ತರ್ಜುಮೆ ಮಾಡಿ ಎಂದು ಎಚ್ಚರಿಸಿದಾಗ ಜೋರಾಗಿ ನಕ್ಕು ಸಮ್ಮತಿ ಸೂಚಿಸಿದರು. ಇಬ್ಬರು ಪರಸ್ಪರ ರಾಜೀನಾಮೆ ನೀಡಬೇಕೆಂದು ಕೆಲವು ದಿನಗಳಿಂದ ಬಹಿರಂಗವಾಗವಾಗಿಯೇ ಬಾಯ್ದಾಡಿಕೊಂಡಿದ್ದರು.      


ಕನ್ನಡ ಪ್ರಭಕ್ಕಾಗಿ  http://kpepaper.asianetnews.com ಕ್ಲಿಕ್ ಮಾಡಿ

loader