ಸರ್ಕಾರದ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿ ಸುದ್ದಿಯಾಗಿದ್ದ ರಾಜಸ್ಥಾನದ ಬಿಜೆಪಿ ಶಾಸಕ ಜಗದೀಶ್ ನಾರಾಯಣ್ ಮೀನಾರ ಪುತ್ರ, ಇದೀಗ ಹುದ್ದೆಗೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ವಿಷಯ ಇದೀಗ ವಿವಾದಕ್ಕೂ ಕಾರಣವಾಗಿದೆ.
ಜೈಪುರ (ಜ.06): ಸರ್ಕಾರದ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿ ಸುದ್ದಿಯಾಗಿದ್ದ ರಾಜಸ್ಥಾನದ ಬಿಜೆಪಿ ಶಾಸಕ ಜಗದೀಶ್ ನಾರಾಯಣ್ ಮೀನಾರ ಪುತ್ರ, ಇದೀಗ ಹುದ್ದೆಗೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ವಿಷಯ ಇದೀಗ ವಿವಾದಕ್ಕೂ ಕಾರಣವಾಗಿದೆ.
ರಾಜಸ್ಥಾನ ವಿಧಾನಸಭಾ ಭವನ ದಲ್ಲಿ 18 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ 129 ಎಂಜಿನಿಯರ್‌ಗಳು, 23 ವಕೀಲರು, 393 ಪದವೀಧರರೂ ಸೇರಿ 12453 ಜನ ಅರ್ಜಿ ಹಾಕಿದ್ದರು. ಅವರೆಲ್ಲರನ್ನೂ ಹಿಂದಿಕ್ಕಿ 10ನೇ ತರಗತಿ ಓದಿರುವ ಬಿಜೆಪಿ ಶಾಸಕನ ಪುತ್ರ ಆಯ್ಕೆಯಾಗಿದ್ದಾರೆ. ಇದು ಹೇಗೆ ಸಾಧ್ಯವಾಯ್ತು ಎಂದು ವಿಪಕ್ಷಗಳು ಪ್ರಶ್ನಿಸಿವೆ.
