ಲಂಡನ್[ಡಿ.10]: ಬ್ಯಾಂಕುಗಳಿಗೆ 9 ಸಾವಿರ ಕೋಟಿ ರು. ಸಾಲ ಮರುಪಾವತಿ ಸದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಗಡೀ ಪಾರು ಕುರಿತ ತೀರ್ಪನ್ನು ಬ್ರಿಟನ ನ್ಯಾಯಾಲಯವೊಂದು ಸೋಮವಾರ ಪ್ರಕಟಿಸಲಿದೆ. ತೀರ್ಪು ಹಿನ್ನೆಲೆಯಲ್ಲಿ ವಿಚಾರಣೆಯಲ್ಲಿ ಭಾಗವಹಿಸಲು ಲಂಡನ್‌ಗೆ ಭಾರತದಿಂದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೆರಳಿದ್ದಾರೆ.

"

'ಪ್ಲೀಸ್ ನಿಮ್ಮ ಹಣ ತಗೊಳ್ಳಿ': ಮಲ್ಯ ಮನವಿಗೆ ಎಲ್ಲರೂ ದಂಗು!

ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ದಲ್ಲಾಳಿ ಪಾತ್ರ ನಿರ್ವಹಿಸಿದ್ದ ಕ್ರಿಸ್ಟಿಯನ್ ಮಿಶೆಲ್‌ನನ್ನು ಯಶಸ್ವಿಯಾಗಿ ದುಬೈನಿಂದ ಗಡೀಪಾರು ಮಾಡಿಸಿಕೊಂಡಿದ್ದ ಕೇಂದ್ರ ಸರ್ಕಾರ, ಮಲ್ಯ ಪ್ರಕರಣದಲ್ಲೂ ಯಶಸ್ಸು ಸಾಧಿಸುವ ವಿಶ್ವಾಸದಲ್ಲಿದೆ. ಒಂದು ವೇಳೆ ಮಲ್ಯರನ್ನು ಗಡಿಪಾರು ಮಾಡಬೇಕೆಂದು ಕೋರ್ಟ್ ತೀರ್ಪು ನೀಡಿದರೂ, ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ ಮಲ್ಯಗೆ ಇದ್ದೇ ಇದೆ. 

ಮಲ್ಯರಂಥ ಆರ್ಥಿಕ ಅಪರಾಧಿಗಳಿಗೆ ಆಶ್ರಯ ನೀಡಬೇಡಿ: ಮೋದಿ

ಹೀಗಾಗಿ ಸೋಮವಾರ ಬ್ಯಾಂಕ್‌ಗಳ ಪರವಾಗಿ ತೀರ್ಪು ಬಂದರೂ ತಕ್ಷಣಕ್ಕೆ ಮಲ್ಯ ಗಡಿಪಾರು ಆಗುವುದಿಲ್ಲ. ಮಲ್ಯ ಗಡೀಪಾರು ಕುರಿತಂತೆ ಕಳೆದ ವರ್ಷ ಡಿ.4ರಿಂದ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಮಲ್ಯ ಅವರನ್ನು ಅಧಿಕಾರಿಗಳು ಬಂಧಿಸಿದ್ದರಾದರೂ, ನಂತರ ಜಾಮೀನು ದೊರೆತಿತ್ತು. ತೀರ್ಪು ಪ್ರಕಟಣೆ ದಿನ ಸಮೀಪಿಸುತ್ತಿದ್ದಂತೆ ಕಳೆದ ವಾರ ಬ್ಯಾಂಕುಗಳು ಹಾಗೂ ಸರ್ಕಾರದ ಮುಂದೆ ಹೊಸದಾಗಿ ಮಲ್ಯ ಆಫರ್ ವೊಂದನ್ನು ಇಟ್ಟಿದ್ದರು. ಸಾಲವಾಗಿ ಪಡೆದಿರುವ ಮೊತ್ತದ ಪೈಕಿ ಅಸಲನ್ನು ಪೂರ್ತಿಯಾಗಿ ಪಾವತಿಸುತ್ತೇನೆ ಎಂದು ಹೇಳಿದ್ದರು. ನಾನು ಒಂದೇ ಒಂದು ರುಪಾಯಿಯನ್ನೂ ಬ್ಯಾಂಕುಗಳಿಂದ ಪಡೆದಿಲ್ಲ. ಬ್ಯಾಂಕುಗಳಿಂದ ಸಾಲ ಮಾಡಿದ್ದು ಕಿಂಗ್‌ಫಿಷರ್ ಏರ್‌ಲೈನ್ಸ್. ನೈಜ ವ್ಯವಹಾರ ವೈಫಲ್ಯದ ಹಿನ್ನೆಲೆಯಲ್ಲಿ ಹಣ ಕಳೆದುಹೋಯಿತು ಎಂದು ಈ ಹಿಂದೆ ಟ್ವೀಟ್‌ಗಳನ್ನು ಮಾಡಿದ್ದ ಮಲ್ಯ ಅವರ ಬದಲಾದ ನಡೆ ಅಚ್ಚರಿಗೂ ಕಾರಣವಾಗಿತ್ತು.

ಹೊಸ ಬೇಟೆಗೆ ಸಜ್ಜಾದ ಮೋದಿ: ಪಾತಾಳದಲ್ಲಿ ಅಡಗಿದ್ರೂ ಉಳಿಗಾಲವಿಲ್ಲ

ಗಡೀಪಾರು ತಪ್ಪಿಸಿಕೊಳ್ಳಲು ಮಲ್ಯ ಅವರು ನ್ಯಾಯಾಲಯದಲ್ಲಿ ಹಲವಾರು ಕಸರತ್ತುಗಳನ್ನು ನಡೆಸಿದ್ದಾರೆ. ಭಾರತೀಯ ಜೈಲುಗಳು ಸರಿ ಇಲ್ಲ. ಅಲ್ಲಿಗೆ ಹೋದರೆ ಜೀವಕ್ಕೇ ಅಪಾಯವಿದೆ ಎಂದೆಲ್ಲಾ ವಾದಿಸಿದ್ದಾರೆ. ಆದರೆ ಮುಂಬೈ ಮೇಲಿನ ದಾಳಿಕೋರ ಅಜ್ಮಲ್ ಕಸಬ್‌ನನ್ನು ಬಂಧಿಸಿಟ್ಟಿದ್ದ, ಹಲವು ಸೌಕರ್ಯ ಹೊಂದಿರುವ ಮುಂಬೈನ ಆರ್ಥರ್ ರಸ್ತೆಯ ಕಾರಾಗೃಹದಲ್ಲಿ ಮಲ್ಯರನ್ನು ಇಡುವುದಾಗಿ ಸಮರ್ಥವಾಗಿ ಕೇಂದ್ರ ಸರ್ಕಾರ ವಾದ ಮಂಡಿಸಿದೆ.