ಬ್ಯಾಂಕ್‌ಗಳಿಂದ ಸಾಲ ಪಡೆದು ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ ಇದೀಗ ಬ್ಯಾಂಕ್‌ನಿಂದ ಪಡೆದ ಸಾಲ ಮರುಪಾವತಿಸಲು ಸಿದ್ಧರಾಗಿದ್ದಾರೆ. ಈ ಕುರಿತಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಸದ್ಯ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.

ಮದ್ಯ ದೊರೆ ಹಾಗೂ ಭಾರತೀಯ ಬ್ಯಾಂಕ್‌ಗಳಿಂದ ಸಾಲ ಪಡೆದು ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ ಇದೀಗ ಬ್ಯಾಂಕ್ ನಿಂದ ಪಡೆದ ಸಾಲ ಮರುಪಾವತಿಸಲು ಸಿದ್ಧರಾಗಿದ್ದಾರೆ. ಬುಧವಾರದಂದು ಬೆಳ್ಳಂ ಬೆಳಗ್ಗೆ ಟ್ವೀಟ್ ಮಾಡಿರುವ ಮಲ್ಯ ಈ ವಿಚಾರವನ್ನು ಬಹುರಂಗಪಡಿಸಿದ್ದಾರೆ. ಆದರೆ ತಾನು ಈ ಮೊತ್ತದ ಬಡ್ಡಿ ಪಾವತಿಸುವುದಿಲ್ಲ ಎಂದೂ ತಿಳಿಸಿದ್ದಾರೆ.

Scroll to load tweet…

ಒಂದೇ ಬಾರಿ 3 ಟ್ವೀಟ್ ಮಾಡಿರುವ ಮಲ್ಯ ಬ್ಯಾಂಕ್‌ಗಳಿಂದ ಸಾಲವಾಗಿ ಪಡೆದ ಮೂಲಧನವನ್ನು ಶೇ. 100 ರಷ್ಟು ಮರು ಪಾವತಿಸುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮ ಹಾಗೂ ರಾಜಕೀಯ ನಾಯಕರು ತನ್ನನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದೂ ತಿಳಿಸಿದ್ದಾರೆ. ವಿಜಯ್ ಮಲ್ಯರ ಮೇಲೆ ಸುಮಾರು 9 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲ ಇದೆ ಎಂಬುವುದು ಗಮನಾರ್ಹ.

Scroll to load tweet…


ಟ್ವೀಟ್ ಮಾಡಿರುವ ವಿಜಯ್ ಮಲ್ಯ ಕಳೆದ ಮೂರು ದಶಕಗಳವರೆಗೆ ಅತಿ ದೊಡ್ಡ ಮದ್ಯದ ಕಂಪೆನಿ ಕಿಂಗ್‌ಫಿಷರ್ ಭಾರತದಲ್ಲಿ ಉದ್ಯಮ ನಡೆಸಿದೆ. ಈ ಸಂದರ್ಭದಲ್ಲಿ ಹಲವಾರು ರಾಜ್ಯಗಳು ಸಹಾಯ ಮಾಡಿವೆ. ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆ ಕೂಡಾ ಸರ್ಕಾರಕ್ಕೆ ಬಹಳಷ್ಟು ಹಣ ಪಾವತಿಸುತ್ತಿತ್ತು. ಆದರೆ ಈ ಅದ್ಭುತ ವಿಮಾನಯಾನ ಸಂಸ್ಥೆಯು ದುರಂತ ಅಂತ್ಯ ಕಂಡಿತು. ಆದರೆ ಬ್ಯಾಂಕ್‌ಗಳು ನಷ್ಟದಲ್ಲಿರಬಾರದು ಹೀಗಾಗಿ ನಾನು ಬ್ಯಾಂಕ್‌ಗಳ ಹಣ ಪಾವತಿಸುತ್ತೇನೆ. ದಯವಿಟ್ಟು ಈ ಆಫರ್ ಸ್ವೀಕರಿಸಿ.

Scroll to load tweet…

ತಮ್ಮ ಮತ್ತೊಂದು ಟ್ವೀಟ್‌ನಲ್ಲಿ ಮಾಧ್ಯಮ ಹಾಗೂ ರಾಜಕಾರಣಿಗಳು ನಿರಂತರವಾಗಿ ನನ್ನನ್ನು ಪಿಎಸ್‌ಯು ಬ್ಯಾಂಕ್‌ಗಳ ಹಣ ದೋಚಿ ವಿದೇಶಕ್ಕೆ ಪರಾರಿಯಾದವನೆಂದು ಘೋಷಿಸುತ್ತಿದ್ದಾರೆ. ಆದರೆ ಇದೆಲ್ಲವೂ ಸುಳ್ಳು. ನನ್ನನ್ನು ತಪ್ಪಿತಸ್ಥನಾಗಿ ತೋರಿಸಿದ್ದಾರೆ. ನನ್ನೊಂದಿಗೆ ಯಾಕೆ ಒಳ್ಳೆಯ ರೀತಿಯಲ್ಲಿ ವ್ಯವಹರಿಸುತ್ತಿಲ್ಲ? ನಾನು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಹಣದ ವಿಲೇವಾರಿ ಮಾಡುವ ಕುರಿತಾಗಿ ಚರ್ಚಿಸಿದ್ದೆ ಆದರೆ ಇದನ್ನು ಯಾಕೆ ಯಾರೂ ಚರ್ಚಿಸಿಲ್ಲ. ಇದು ನಿಜಕ್ಕೂ ದುಃಖದ ವಿಚಾರ ಎಂದಿದ್ದಾರೆ.

Scroll to load tweet…

ಮೂರನೇ ಟ್ವೀಟ್‌ನಲ್ಲಿ ತಮ್ಮ ಅಳಲು ತೋಡಿಕೊಂಡಿರುವ ಮದ್ಯದ ದೊರೆ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಇಂಧನ ದರ ಏರಿಕೆಗೆ ಬಲಿಪಶುವಾಯ್ತು. ಇದೊಂದು ಅದ್ಭುತ ಏರ್ಲೈನ್ಸ್ ಆಗಿತ್ತು. ಯಾಕೆಂದರೆ ಇದು ಅತಿ ಉತ್ಕೃಷ್ಟ ಅಂದರೆ ಪ್ರತಿ ಬ್ಯಾರೆಲ್‌ಗೂ 140 ಡಾಲರ್ ಇಂಧನ ಬೆಲೆಯನ್ನು ಎದುರಿಸಿತ್ತು. ದರ ಹೆಚ್ಚಾಗುತ್ತಾ ಹೋಯ್ತು ಬ್ಯಾಂಕ್‌ನಿಂದ ಪಡೆದ ಸಾಲದ ಮೊತ್ತ ಇದಕ್ಕೇ ಖರ್ಚಾಗಲಾರಂಭಿಸಿತು. ನಾನು ಶೇ. 100 ರಷ್ಟು ಬ್ಯಾಂಕ್‌ಳಿಂದ ಸಾಲವಾಗಿ ಪಡೆದ ಮೂಲಧನವನ್ನು ಪಾತಿಸುತ್ತೇನೆ. ಈ ನನ್ನ ಆಫರ್ ಸ್ವೀಕರಿಸಿ ಎಂದಿದ್ದಾರೆ.