ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಯಾಗಿ ಲೋಕಸಭಾ ಚುನಾವಣೆ ಎದುರಿಸಿದ್ದೇ ಆದಲ್ಲಿ ಹಾಸನ ಕ್ಷೇತ್ರವನ್ನು ಜೆಡಿಎಸ್ ಕೇಳಿದರೆ ಮಂಡ್ಯವನ್ನು ಕಾಂಗ್ರೆ ಸ್‌ಗೆ ಬಿಟ್ಟುಕೊಡು ವಂತೆ ಷರತ್ತು ವಿಧಿಸಲು ಕಾಂಗ್ರೆಸ್ ನಾಯಕತ್ವವನ್ನು ಆಗ್ರಹಿಸಲು ಪಕ್ಷದ ಮಾಜಿ ಶಾಸಕರು ಗುಂಪು ತೀರ್ಮಾನಿಸಿದೆ. 

ಅಲ್ಲದೇ  ಕ್ಷೇತ್ರದ ಟಿಕೆಟ್ ಅನ್ನು ಅಂಬರೀಶ್ ಅವರ ಪುತ್ರ ಅಭಿಷೇಕ್ ಗೆ ನೀಡಿ ಕಣಕ್ಕೆ ಇಳಿಸೋಣ ಎಂದಿದ್ದಾರೆ. 

ನಗರದಲ್ಲಿ ಮಾಜಿ ಸಚಿವ ಎ. ಮಂಜು ನಿವಾಸದಲ್ಲಿ ಸೋಮವಾರ ಸಭೆ ನಡೆಸಿದ ಕಾಂಗ್ರೆಸ್‌ನ ಮಾಜಿ ಶಾಸಕರು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂತಹ ತೀರ್ಮಾನ ಕೈಗೊಳ್ಳಬೇಕು ಎಂದು ಪಕ್ಷದ ನಾಯಕತ್ವನ್ನು ಒತ್ತಾಯಿಸಲು ತೀರ್ಮಾನಿಸಿದರು.