ಮಂಡ್ಯ[ಮಾ.06] ಕಳೆದ  ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಕೈ ಜೋಡಿಸಿದ್ದ ಬಹುಜನ ಸಮಾಜ ಪಾರ್ಟಿ[ಬಿಎಸ್ಪಿ]  ಲೋಕ ಸಮರಕ್ಕೆ  ಜೆಡಿಎಸ್ ನಿಂದ ದೂರವಾಗಿದೆ.

ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಬಿಎಸ್‌ಪಿ ಸ್ಪರ್ಧೆ ಮಾಡಲಿದೆ. ಯಾವ ಪಕ್ಷವನ್ನೂ ಬೆಂಬಲಿಸದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಸೂಚಿಸಿದ್ದಾರೆ ಎಂದು  ಸುವರ್ಣ ನ್ಯೂಸ್ ಗೆ ಬಿಎಸ್ಪಿ ಮಂಡ್ಯ ಜಿಲ್ಲಾ ಉಸ್ತುವಾರಿ ನರಸಿಂಹಮೂರ್ತಿ ತಿಳಿಸಿದ್ದಾರೆ.

10 ಸೀಟಿಗೆ ಪಟ್ಟು ಹಿಡಿದ ದೇವೇಗೌಡ್ರು; ಏನಾಯ್ತು ರಾಹುಲ್-ದೇವೇಗೌಡ್ರ ಸಭೆ?

ಸುಮಲತಾಗೆ ಬಿಎಸ್ಪಿ ಆಹ್ವಾನ: ಕಾಂಗ್ರೆಸ್ ಟಿಕೆಟ್ ನಿಂದ ವಂಚಿತರಾಗಿರುವ ಸುಮಲತಾ ಅಂಬರೀಶ್ ಅವರಿಗೆ ಬಿಎಸ್ಪಿ ಆಹ್ವಾನ ನೀಡಿದೆ. ನಮ್ಮ  ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತವಿದೆ. ಬಿಎಸ್ಪಿಯಿಂದ ಸ್ಪರ್ಧೆ ಮಾಡಿ ಎಂದು  ನರಸಿಂಹಮೂರ್ತಿ ಕೇಳಿಕೊಂಡಿದ್ದಾರೆ.