ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಚುನಾವಣಾ ಕಸರತ್ತುಗಳು ಶುರುವಾಗಿವೆ | ಅಯೋಧ್ಯಾ ತೀರ್ಪಿಗಾಗಿ ಕಾಯುತ್ತಿದೆ ಬಿಜೆಪಿ | ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಗೆಲ್ಲಬೇಕಾದರೆ ಮಂದಿರ ಅನಿವಾರ್ಯ ಎಂದು ಬಿಜೆಪಿಯ ಆಂತರಿಕ ಸರ್ವೇಗಳು ಹೇಳುತ್ತಿವೆಯಂತೆ.
ನವದೆಹಲಿ (ಅ. 03): ಅಕ್ಟೋಬರ್ 29 ರಿಂದ ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದದ ವಿಚಾರಣೆ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಲೋಕಸಭಾ ಚುನಾವಣೆ ಒಳಗೆ ತೀರ್ಪು ಬಂದರೆ ಹಿಂದಿ ರಾಜ್ಯಗಳಲ್ಲಿ ಬಂಪರ್ ಲಾಭ ಆಗಬಹುದು ಎಂಬ ನಿರೀಕ್ಷೆಯಿದೆ.
ಆದರೆ ಹೊಸ ದಾಗಿ ಮುಖ್ಯ ನ್ಯಾಯಮೂರ್ತಿ ಆಗಲಿರುವ ನ್ಯಾಯಮೂರ್ತಿ ರಂಜನ್ ಗೊಗೋಯ್ ಲೋಕಸಭಾ ಚುನಾವಣೆ ನಂತರ ನಿವೃತ್ತಿ ಆಗಲಿದ್ದು, ಒಂದು ವೇಳೆ ನ್ಯಾಯಮೂರ್ತಿ ಗೊಗೋಯ್ ಪೀಠದ ಎದುರು ಅಯೋಧ್ಯೆ ವಿಚಾರಣೆ ನಡೆದು ಅವರು ನಿವೃತ್ತಿ ಆಗುವ ಸಮಯದಲ್ಲಿ ತೀರ್ಪು ನೀಡಿದರೆ ಬಿಜೆಪಿ ತನಗೆ ಸಿಗಬಹುದಾದ ಆಮ್ಲಜನಕದಿಂದ ವಂಚಿತ ಆಗುವುದು ನಿಶ್ಚಿತ.
ಬರೀ ಮೋದಿ ನಾಮ ಬಲ ಇಟ್ಟುಕೊಂಡು ಚುನಾವಣೆಗೆ ಹೋಗಬೇಕಾದ ಅನಿವಾರ್ಯತೆ ಇರುವ ಬಿಜೆಪಿಗೆ ಅಯೋಧ್ಯೆ ತೀರ್ಪಿನ ನಿರೀಕ್ಷೆ ತುಸು ಹೆಚ್ಚಾಗಿಯೇ ಇದೆ. ಆರ್‌ಎಸ್‌ಎಸ್ ಅಂತೂ ೨೦೧೯ರ ಚುನಾವಣೆಯಲ್ಲಿ ನೇರವಾಗಿ ರಾಮ ಮಂದಿರ ವಿಷಯವನ್ನು ಪ್ರಸ್ತಾಪಿಸಿ ಎಂದು ಪ್ರಧಾನಿಗೆ ಸಲಹೆ ನೀಡಿದೆ. ಆದರೆ ಸುಪ್ರೀಂಕೋರ್ಟ್ ತೀರ್ಪು ಬರಲಿ ಎಂದು ಪ್ರಧಾನಿ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.
ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಗೆಲ್ಲಬೇಕಾದರೆ ಮಂದಿರ ಅನಿವಾರ್ಯ ಎಂದು ಬಿಜೆಪಿಯ ಆಂತರಿಕ ಸರ್ವೇಗಳು ಹೇಳುತ್ತಿವೆಯಂತೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ವಿಶೇಷ ಪ್ರತಿನಿಧಿ
ರಾಜಕಾರಣಧ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
