ಕಲಾಪಗಳು ಆರಂಭವಾಗುತ್ತಿದದಂತೆ ಪ್ರತಿಪಕ್ಷದ ಸಂಸದರು ನೋಟು ಅಪಮೌಲ್ಯೀಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಾಪವನ್ನು ಮುಂದೂಡುವಂತೆ ಸಭಾಪತಿಯವರನ್ನು ಕೇಳಿಕೊಂಡಿದ್ದಾರೆ.

ನವದೆಹಲಿ (ನ.17): ನೋಟು ಅಪಮೌಲ್ಯೀಕರಣ ಹಾಗೂ ಜನರು ಅನುಭವಿಸುತ್ತಿರಯವ ಸಮಸ್ಯೆಗಳು ಇಂದು ಸಂಸತ್ತಿನಲ್ಲಿ ಪ್ರತಿಧ್ವನಿಸಿವೆ. ಪರಿಣಾಮವಾಗಿ ಲೋಕಸಭೆಯ ಕಲಾಪಗಳನ್ನು ನಾಳೆಯವೆರೆಗೆ ಮುಂದೂಡಲಾಗಿದೆ. ರಾಜ್ಯ ಸಭೆಯ ಕಲಾಪಗಳು ಮಧ್ಯಾಹ್ನದ ಬಳಿಕ ಆರಂಭವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಾಪಗಳು ಆರಂಭವಾಗುತ್ತಿದದಂತೆ ಪ್ರತಿಪಕ್ಷದ ಸಂಸದರು ನೋಟು ಅಪಮೌಲ್ಯೀಕರಣ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಾಪವನ್ನು ಮುಂದೂಡುವಂತೆ ಸಭಾಪತಿಯವರನ್ನು ಕೇಳಿಕೊಂಡಿದ್ದಾರೆ. ಆದರೆ ಕೇಂದ್ರ ಸಚಿವ ಅನಂತ ಕುಮಾರ್ ಸರ್ಕಾರವು ನಿಯಮ 193ರ ಪ್ರಕಾರ, ನೋಟು ಅಪಮೌಲ್ಯೀಕರಣ ಬಗ್ಗೆ ಚರ್ಚಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ನಿನ್ನೆ ಪ್ರತಿಪಕ್ಷಗಳು ನೋಟು ಅಪಮೌಲ್ಯೀಕರಣ ಕುರಿತು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು.

ಅಧಿವೇಶನದ ಮೊದಲನೇ ದಿನವಾಗಿದ್ದ ನಿನ್ನೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಲೋಕಸಭೆಯ ಕಲಾಪಗಳನ್ನು ಮುಂದೂಡಲಾಗಿ