ಬಿಗ್ಬಾಸ್ ವಿನ್ನರ್ ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ನಿನ್ನೆ ಪ್ರಥಮ್ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಿತ ಲೋಕಿ ಈಗ ಸಂಧಾನಕ್ಕೆ ಮುಂದಾಗಿದ್ದಾನೆ.
ಬೆಂಗಳೂರು(ಎ.06): ಬಿಗ್ಬಾಸ್ ವಿನ್ನರ್ ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ನಿನ್ನೆ ಪ್ರಥಮ್ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಿತ ಲೋಕಿ ಈಗ ಸಂಧಾನಕ್ಕೆ ಮುಂದಾಗಿದ್ದಾನೆ.
ಬಿಗ್ಬಾಸ್ ಪ್ರಥಮ್'ಗೂ ಮತ್ತು ಆತನ ಸ್ನೇಹಿತ ಲೋಕಿಗೂ ಸಾಮಾಜಿಕ ಜಾಲತಾಣದಲ್ಲಿ ಹಾಕಿರೋ ವಿಡಿಯೋ ವಿಚಾರಕ್ಕೆ ನಿನ್ನೆ ಗಲಾಟೆಯಾಗಿತ್ತು. ಗಲಾಟೆಯಲ್ಲಿ ಪ್ರಥಮ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಲೋಕಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ದೂರು ದಾಖಲಾಗಿದ್ದು ಗೊತ್ತಾದ ಕೂಡಲೇ ಬಿಗ್ಬಾಸ್ ಪ್ರಥಮ್ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ. ನನಗೆ ಕೆಲವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ನಿದ್ರೆ ಮಾತ್ರೆ ಸೇವಿಸೋ ಮೂಲಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ.
ಈ ವಿಚಾರ ತಿಳಿಯುತ್ತಿದಂತೆ ಆಸ್ಪತ್ರೆಗೆ ಪ್ರಥಮ್ ತಂದೆ ಮಲ್ಲಣ , ನಟಿ ಸಂಜನಾ ಆಗಮಿಸಿ ಪ್ರಥಮ್ ಆರೋಗ್ಯ ವಿಚಾರಿಸಿದ್ದರು. ಇನ್ನು ಪ್ರಥಮ್ ವಿರುದ್ಧ ಆರೋಪ ಮಾಡಿದ್ದ ಗೆಳೆಯ ಲೋಕಿ ಸಹ ಆಸ್ಪತ್ರೆಗೆ ಭೇಟಿ ನೀಡಿದ. ಪ್ರಥಮ್ ಆರೋಗ್ಯ ವಿಚಾರಿಸಿ ಪೊಲೀಸರ ಸಮ್ಮುಖದಲ್ಲಿ ರಾಜಿಯಾಗುತ್ತೇನೆ ಎಂದು ಹೇಳಿದ.
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಥಮ್ ಇವತ್ತು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುವ ಸಾಧ್ಯತೆಯಿದೆ .
