ಅತ್ಯಾ*ಚಾರ ಪ್ರಕರಣದಲ್ಲಿ ವಿಚಾರಣಾ ಪೀಠವನ್ನು ಬದಲಾಯಿಸಬೇಕೆಂದು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು, ಈ ಮನವಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ: ಅತ್ಯಾ*ಚಾರ ಪ್ರಕರಣದ ಅಪರಾಧಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ವಿಚಾರಣಾ ಪೀಠ ಬದಲಾವಣೆ ಅರ್ಜಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ. ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು, ಪೀಠ ಬದಲಾವಣೆಗಾಗಿ ಕೇಳಿರುವ ಕಾರಣಗಳನ್ನು ‘ ಅಸಮರ್ಪಕ’ವೆಂದು ಪರಿಗಣಿಸಿ ಗಂಭೀರ ಪ್ರಶ್ನೆಗಳನ್ನು ಕೇಳಿದೆ. ಈ ಮೂಲಕ ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್ ನಲ್ಲಿ ತೀವ್ರ ಹಿನ್ನಡೆಯಾಗಿದೆ. ಈ ರೀತಿ ಪೀಠ ಬದಲಾವಣೆ ಕೇಳುವುದು ಸರಿ ಅಲ್ಲ. ಯಾವ ಉದ್ದೇಶಕ್ಕೆ ಕೇಳುತ್ತಿದ್ದೀರಿ ಬದಲಾವಣೆ? ನಾವು ಈ ರೀತಿ ಬದಲಾವಣೆ ಮಾಡಿದ್ರೆ ಅದರ ಪರಿಣಾಮಗಳು ಯೋಚಿಸಿ ಎಂದು ಸಿಜೆಐ ಖಡಕ್ ಆಗಿಯೇ ಕೇಳಿದೆ.

ಕೋರ್ಟ್ ಹೇಳಿದ್ದೇನು?

ನ್ಯಾಯಾಧೀಶರು ಮಾಡಿದ ಕೆಲವು ಅಬ್ಸರ್ ವೇಷನ್ ನಾವು ಪರಿಶೀಲಿಸಿದ್ದೇವೆ. ವಿಚಾರಣೆಯ ದಾಖಲೆಯನ್ನು ಉಲ್ಲೇಖಿಸಿ ಮತ್ತು ಹೈಕೋರ್ಟ್ ಮಾಡಿದ ಅಬ್ಸರವೇಷನ್ ಮನಸ್ಸಿನಲ್ಲಿಟ್ಟುಕೊಂಡು ಈ ಅವಲೋಕನಗಳ ನಿಷ್ಪಾಪವಾಗಿ ಮಾಡಲಾಗಿದೆ ಎಂದು ನಮಗೆ ತೋರುತ್ತದೆ. ಈ ಅಬ್ಸರವೇಷನ್ ಪಕ್ಷಪಾತ ಅಥವಾ ಸಮಸ್ಯೆಯನ್ನು ಪೂರ್ವನಿರ್ಧರಿಸುವ ಅಡಿಪಾಯವಾಗಿರಲು ಸಾಧ್ಯವಿಲ್ಲ. ಅರ್ಜಿದಾರರು ಹಿಂದಿನ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ ಎಂಬ ಅಂಶದಿಂದ ನ್ಯಾಯಾಧೀಶರು ಪ್ರಭಾವಿತರಾಗಬಾರದು. 

ಅಲ್ಲದೇ ಪ್ರಸ್ತುತ ವಿಚಾರಣೆಯಲ್ಲಿ ಒದಗಿಸಲಾದ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು. ಅಲ್ಲದೇ ಹಿಂದಿನ ಅಪರಾಧ ನಿರ್ಣಯದ ಆಧಾರದ ಮೇಲೆ ಮತ್ತು ಅಂತಹ ಅಪರಾಧ ನಿರ್ಣಯಕ್ಕೆ ಕಾರಣವಾದ ವಿಚಾರಣೆಯ ಆಧಾರದ ಮೇಲೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬಾರದು ಎಂಬುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ ಎಂದು ಸಿಜೆಐ ಸೂರ್ಯಕಾಂತ್ ಅಭಿಪ್ರಾಯಪಟ್ಟರು. ಹೈಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿ ಇರುವ ಹಿನ್ನೆಲೆಯಲ್ಲಿ, ಅಲ್ಲಿನ ಅಬ್ಸರ್ವೇಷನ್‌‌ಗಳನ್ನು ಸವಾಲು ಮಾಡುವ ಅಥವಾ ಅವನ್ನು ರದ್ದುಗೊಳಿಸುವ ಅರ್ಜಿಯನ್ನು ಹೈಕೋರ್ಟ್‌ಗೇ ಸಲ್ಲಿಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಸಂಬಂಧಿಸಿದವರು ಕ್ಷಮೆ ಕೇಳುವುದು ಸೂಕ್ತ

ವಕೀಲ ಸಿದ್ದಾರ್ಥ್ ದವೆ ವಾದ ಮಂಡಿಸಿದ ವಕೀಲರ ವಿರುದ್ಧದ ಹೇಳಿಕೆಗಳನ್ನು ತೆಗೆದುಹಾಕಬಹುದು ಎಂದರು. ಈ ವೇಳೆ ಹಿರಿಯ ವಕೀಲ ಸಿದ್ದಾರ್ಥ್ ಲೂತ್ರಾ ವಾದಿಸಿ ದು, ಮೈ ಲಾರ್ಡ್‌ ವಿಚಾರಣಾ ನ್ಯಾಯಾಲಯವು ವಕೀಲರ ವಿರುದ್ಧ ದುಷ್ಕೃತ್ಯಕ್ಕಾಗಿ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತದೆ ಎಂದರು.

ಇದು ವೃತ್ತಿಪರತೆಗೆ ವಿರುದ್ಧವಾದ ವರ್ತನೆ. ಹೈಕೋರ್ಟ್ ಪರಿಗಣಿಸುವ ಮೊದಲು ಸಂಬಂಧಿಸಿದವರು ಕ್ಷಮೆಯಾಚಿಸುವುದು ಸೂಕ್ತ. ‘ಸುಪ್ರೀಂ ಕೋರ್ಟ್‌ಗೆ ಹೋಗಿ ಹೀಗೆ ಮಾಡಬಹುದು’ ಎಂಬ ತಪ್ಪು ಸಂದೇಶ ಹೋಗಬಾರದು. ನಮ್ಮ ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ಸಹ ನಾವು ನೋಡಿಕೊಳ್ಳಬೇಕು ಎಂದು ಹೇಳಿದ ಸುಪ್ರೀಂ ಕೋರ್ಟ್ ಸೆಷನ್ಸ್ ಕೋರ್ಟ್‌ ನ ಎಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಮ್ಮ ವಿರುದ್ಧ ನಡೆಸುತ್ತಿರುವ ವಿಚಾರಣೆಗಳಲ್ಲಿ ಪಕ್ಷಪಾತದ ತೋರುತ್ತಿದೆ. ಇದರ ಆಧಾರದ ಮೇಲೆ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಕೋರಿ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದರು. ಹೈಕೋರ್ಟ್ ಕೂಡ ಈ ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಈಗ ಸುಪ್ರೀಂ ಕೋರ್ಟ್ ಕೂಡ ಅರ್ಜಿ ವಜಾಗೊಳಿಸಿದೆ. ಈ ಮೂಲಕ ಮತ್ತೆ ಹಾಸನದ ಮಾಜಿ ಸಂಸದನಿಗೆ ಹಿನ್ನಡೆಯಾಗಿದೆ.