ಬಹುದಿನಗಳಿಂದ ಕಾಯುತ್ತಿದ್ದ ತಾಯ್ತನ ಮಸೂದೆಗೆ ಧ್ವನಿ ಮತದ ಮೂಲಕ ಲೋಕಸಭೆಯಲ್ಲಿಂದು ಅನುಮೋದನೆ ನೀಡಲಾಯಿತು.
ನವದೆಹಲಿ (ಮಾ.09): ಬಹುದಿನಗಳಿಂದ ಕಾಯುತ್ತಿದ್ದ ತಾಯ್ತನ ಮಸೂದೆಗೆ ಧ್ವನಿ ಮತದ ಮೂಲಕ ಲೋಕಸಭೆಯಲ್ಲಿಂದು ಅನುಮೋದನೆ ನೀಡಲಾಯಿತು.
ಗರ್ಭಿಣಿ ಮಹಿಳೆಯರಿಗೆ ತಾಯ್ತನ ರಜೆಯ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಸಲಾಗಿದೆ. ಗರ್ಭಧಾರಣೆ ಸಮಯದಲ್ಲಿ ಉದ್ಯೋಗದ ಕಿರಿಕಿರಿಯನ್ನು ತಪ್ಪಿಸಲು ಒತ್ತು ನೀಡಲಾಗಿದೆ ಮತ್ತು ಮಗುವಿನ ಲಾಲನೆ ಪಾಲನೆಗಾಗಿ ರಜೆಯಲ್ಲಿದ್ದರೂ ವೇತನ ಪಾವತಿಸಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ.
ತಾಯ್ತನ ಲಾಭಾಂಶ ಮಸೂದೆ 2016 ನ್ನು ಕಳೆದ ವರ್ಷ ಆಗಸ್ಟ್ ನಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಸಂಘಟಿತ ವಲಯದಲ್ಲಿರುವ 1.8 ಮಿಲಿಯನ್ ಮಹಿಳೆಯರಿಗೆ ಅನುಕೂಲವಾಗಲಿ ಎಂಬುದು ಇದರ ಉದ್ದೇಶವಾಗಿದೆ. 10 ಅಥವಾ 10 ಕ್ಕಿಂತ ಹೆಚ್ಚು ಮಂದಿ ಮಹಿಳೆಯರು ಇರುವ ಸಂಸ್ಥೆಗಳಿಗೆ ಮಾತ್ರ ಈ ಮಸೂದೆ ಅನ್ವಯವಾಗಲಿದೆ. ಕೆನಡಾ ಮತ್ತು ನಾರ್ವೆಯ ಬಳಿಕ ತಾಯ್ತನ ರಜೆಯಲ್ಲಿ 3 ನೇ ಸ್ಥಾನದಲ್ಲಿದೆ.
ಮೊದಲೆರಡು ಪ್ರಸವಕ್ಕೆ ಮಾತ್ರ ಈ ರಜೆ ಅವಧಿ ಅನ್ವಯವಾಗಲಿದೆ. ಮೂರನೇ ಮಗುವಿಗೆ 12 ತಿಂಗಳು ರಜಾವಧಿಯೇ ಮುಂದುವರೆಯಲಿದೆ.
