ಪಕ್ಷದ ಮುಖಂಡನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಂಸದರೋರ್ವರು ಇದೀಗ ಪಕ್ಷಕ್ಕೆ ತಮ್ಮ ರಾಜೀನಾಮೆ ನೀಡಿ ಚುನಾವಣೆ ಹೊಸ್ತಿಲಲ್ಲೇ ಶಾಕ್ ನೀಡಿದ್ದಾರೆ. 

ಹೈದ್ರಾಬಾದ್ :  ತೆಲಂಗಾಣದಲ್ಲಿ ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿಆರ್ ಎಸ್ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಪಕ್ಷವನ್ನು ತೊರೆದಿದ್ದಾರೆ. ಚೆವೆಲ್ಲಾ ಕ್ಷೇತ್ರದ ಸಂಸದರಾಗಿದ್ದ ರೆಡ್ಡಿ ಪಕ್ಷದಲ್ಲಿನ ಕೆಲವು ನಡೆಯಿಂದ ತಮಗೆ ಅಸಮಾಧಾನ ಉಂಟಾಗಿದ್ದು ಈ ನಿಟ್ಟಿನಲ್ಲಿ ಪಕ್ಷವನ್ನು ತೊರೆದಿದ್ದಾಗಿ ಹೇಳಿದ್ದಾರೆ. 

ಅಲ್ಲದೇ ಪಕ್ಷದ ಮುಖಂಡರಾಗಿರುವ ಚಂದ್ರಶೇಖರ್ ರಾವ್ ಅವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಯೋಚಿಸಿದ್ದಾಗಿಯೂ ಕೂಡ ಹೇಳಿದ್ದಾರೆ. 

ತಮ್ಮ ಸಿದ್ಧಾಂತಗಳು ಹೊಂದಾಣಿಕೆಯಾಗದ ಕಾರಣ ಪಕ್ಷವನ್ನು ತೊರೆದಿದ್ದಾಗಿಯೂ ಅವರು ಹೇಳಿದ್ದಾರೆ. 

ತೆಲಂಗಾಣದಲ್ಲಿ ಮುಂದಿನ ಡಿಸೆಂಬರ್ 7 ರಂದು ಚುನಾವಣೆ ನಡೆಯುತ್ತಿದ್ದು ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗುತ್ತಿದೆ.