ಬೆಂಗಳೂರು[ನ.16]  ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷರು ಸೇರಿದಂತೆ ಪಕ್ಷದಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನುವುದು ಬಿಜೆಪಿ ವಲಯದಿಂದಲೇ ಕೇಳಿ ಬಂದ ಮಾಹಿತಿ.

ಹಾಲಿ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದಾರೆ. ಯಡಿಯೂರಪ್ಪನವರನ್ನು ಬದಲಾಯಿಸಿದರೆ ಅವರಿಗೆ ಪರ್ಯಾಯವಾಗಿ ಪಕ್ಷದ ಸಾರಥ್ಯವನ್ನು ಯಾರ ಹೆಗಲಿಗೆ ವಹಿಸಬೇಕು ಎಂಬುದರ ಕುರಿತಂತೆ ಅಮಿತ್ ಶಾ ಸಂಘ ಪರಿವಾರ ಮತ್ತು ಕರಾವಳಿ ಭಾಗದ ನಾಯಕರಿಂದ ಅಭಿಪ್ರಾಯ ಪಡೆದಿದ್ದಾರೆ.

ಬಿಜೆಪಿ ಮುಂದೆ ಇರುವ ಆಯ್ಕೆ
1.ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕೆ? ಏಕಾಏಕಿ ಅಧ್ಯಕ್ಷ ಸ್ಥಾನದಿಂದ ಬಿಎಸ್‍ವೈ ಅವರನ್ನು ಬದಲಾಯಿಸಿದರೆ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ವೀರಶೈವ ಲಿಂಗಾಯಿತ ಸಮುದಾಯ ಲೋಕಸಭೆ ಚುನಾವಣೆ ವೇಳೆ ಮುನಿಸಿಕೊಳ್ಳಬಹುದು ಎಂಬ ಭೀತಿಯೂ ವರಿಷ್ಠರನ್ನು ಕಾಡುತ್ತಿದೆ. ಹೀಗಾಗಿ ಯಡಿಯೂರಪ್ಪ ಸೂಚಿಸಿದವರನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಿ ಅವರ ಮಾರ್ಗದರ್ಶನದಲ್ಲೇ ಪಕ್ಷವನ್ನು ಮುನ್ನಡೆಸಬೇಕೆ ಎಂಬ ವಿಚಾರವೂ ಚರ್ಚೆಯಾಗಿದೆ.

ಮಂಗ್ಳೂರಲ್ಲಿ ಸಿದ್ಧವಾಯ್ತು ಚಾಣಕ್ಯ ಪಂಚಸೂತ್ರ.. ಕ್ಲಿಕ್ ಆದರೆ ವಿರೋಧಿಗಳು ನೀರ್ನಾಮ!

2. ಸಿಟಿ ರವಿಗೆ ಜವಾಬ್ದಾರಿ: ಚಿಕ್ಕಮಗಳೂರು ಭಾಗದ ಪ್ರಭಾವಿ ನಾಯಕ ಸಂಘ ನಿಷ್ಠ ಸಿಟಿರವಿ, ನಳೀನ್ ಕುಮಾರ್ ಕಟೀಲ್ ಮತ್ತು ಅರವಿಂದ ಲಿಂಬಾವಳಿ ಅವರಿಗೆ ಹೊಸ ಜವಾಬ್ದಾರಿ ನೀಡಬಹುದೆ? ಎಂಬ ಮಾತು ಚರ್ಚೆಯಾಗಿದೆ.

3.ಯುವಕರಿಗೆ ಮಣೆ: ಯುವ ನಾಯಕ ಮತ್ತು ಸಂಘ ನಿಷ್ಠವಾಗಿರುವರನ್ನೇ ಆಯ್ಕೆ ಮಾಡಿದರೆ ಹೇಗೆ? ಜಾತಿ-ಕೋಮು-ಸಮುದಾಯವನ್ನು ಹಿಂದೆ ಸರಿಸಿ ಆಕ್ರಮಣಕಾರಿ ತಂತ್ರಗಾರಿಗೆ ನಡೆಸಿದರೆ ಸಿದ್ಧಿಸಬಹುದೆ? ಎಂಬುದನ್ನು ಬಿಜೆಪಿ ಲೆಕ್ಕ ಹಾಕಿದೆ. ಮುಂದಿನ ಲೋಕಸಭಾ ಚುನಾವಣೆವರೆಗೆ ಬದಲಾವಣೆ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ. ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ಮಾತು ಬಂದಿದೆ.