ಸೆಪ್ಟೆಂಬರ್ 27ರಂದು ದೂರನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ದೂರುದಾರ ವಿಠಲ್ ಗೌಡರಿಗೆ ನಟಿ ರಮ್ಯಾ ನೀಡಿರುವ ಹೇಳಿಕೆಯನ್ನು ದೇಶದ್ರೋಹ ಹೇಗೆ ಆಗಲಿದೆ ಮತ್ತು ಹೇಳಿಕೆ ನೀಡಿರುವುದಕ್ಕೆ ಸಾಕ್ಷಿ ಒದಗಿಸುವಂತೆ ತಿಳಿಸಿತ್ತು.

ಮಡಿಕೇರಿ (ಅ.19): ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪಾಕಿಸ್ತಾನವನ್ನು ಹೊಗಳಿದ ಹಿನ್ನಲೆಯಲ್ಲಿ ದೇಶದ್ರೋಹದ ಆರೋಪದ ಮೇಲೆ ವಕೀಲ ವಿಠಲ್ ಗೌಡ ಸೋಮವಾರಪೇಟೆಯ ಜೆಎಂಎಫ್ ಸಿ ಕೋರ್ಟ್​ ನಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಸೆಪ್ಟೆಂಬರ್ 27ರಂದು ದೂರನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ದೂರುದಾರ ವಿಠಲ್ ಗೌಡರಿಗೆ ನಟಿ ರಮ್ಯಾ ನೀಡಿರುವ ಹೇಳಿಕೆಯನ್ನು ದೇಶದ್ರೋಹ ಹೇಗೆ ಆಗಲಿದೆ ಮತ್ತು ಹೇಳಿಕೆ ನೀಡಿರುವುದಕ್ಕೆ ಸಾಕ್ಷಿ ಒದಗಿಸುವಂತೆ ತಿಳಿಸಿತ್ತು.

ಹೀಗಾಗಿ ಇವತ್ತು ಸೋಮವಾರಪೇಟೆ ನ್ಯಾಯಾಲಯಕ್ಕೆ ದೂರದಾರ ವಿಠಲ್ ಗೌಡ ಹಾಜರಾಗಲಿದ್ದು,ಅಗತ್ಯ ದಾಖಲೆ ಒದಗಿಸಲಿದ್ದಾರೆ.