ಪ.ಬಂಗಾಳದಲ್ಲಿ ಮತ್ತೋರ್ವ ಬಿಜೆಪಿ ಮುಖಂಡ ಹತ್ಯೆನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ ಆಗುಂತಕರುಬಿಜೆಪಿ ಮುಖಂಡ ಶಕ್ತಪ್ರದಾ ಸರ್ಕಾರ್ ಕೊಲೆಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನ
ಕೋಲ್ಕತ್ತಾ(ಜು.28): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡರ ಸರಣಿ ಹತ್ಯೆಗಳು ಮುಂದುವರೆದಿವೆ. ದಕ್ಷಿಣ 24 ಪರಗಣಾ ಜಿಲ್ಲೆಯ ಮಂದಿರ್ ಬಜಾರ್ ನ ಸ್ಥಳೀಯ ಬಿಜೆಪಿ ಮುಖಂಡ ಶಕ್ತಪ್ರದಾ ಸರ್ದಾರ್ ಅವರನ್ನು ಅಪರಿಚತರು ಕೊಲೆ ಮಾಡಿದ್ದಾರೆ.
ನಿನ್ನೆ ರಾತ್ರಿ ಪಕ್ಷದ ಕಚೇರಿಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಬಿಜೆಪಿ ಮಂಡಲ್ ಸಮಿತಿಯ ಕಾರ್ಯದರ್ಶಿ ಶಕ್ತಪದಾ ಸರ್ದಾರ್ ಅವರನ್ನು ಅಡ್ಡಗಟ್ಟಿದ ಆಗುಂತಕರು, ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ತೀವ್ರ ರಕ್ತಸ್ರಾವದಿಂದ ರಸ್ತೆ ಮೇಲೆ ಬಿದ್ದು ಒದ್ದಾಡುತ್ತಿದ್ದ ಶಕ್ತಪ್ರದಾ ಅವರನ್ನುಡೈಮಂಡ್ ಬಂದರಿನ ಆಸ್ಪತ್ರೆಗೆ ಸ್ಥಳಿಯರು ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.
ಘಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕ, ಅಧಿಕಾರಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ಹಿಂಸೆಯನ್ನು ಆಶ್ರಯಿಸಿದ್ದಾರೆ ಎಂದು ಕಿಡಿಕಾರಿದೆ. ಏತನ್ಮಧ್ಯೆ, ಮಂದಿರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
