1-2 ದಿನದ ಹಿಂದಷ್ಟೇ ಸಾಲ ಮರುಪಾವತಿ ಮಾಡಿದ್ದೀರಾ? ಈಗಿನ ಸಾಲ ಮನ್ನಾ ಯೋಜ ನೆಯ ಲಾಭ ನನಗೆ ಜಸ್ಟ್‌ ಮಿಸ್‌ ಆಯಿತು ಎಂದು ಕೈಕೈ ಹೊಸಕಿ ಕೊಳ್ಳುತ್ತಿದ್ದೀರಾ? ಚಿಂತೆ ಬೇಡ. ನಿಮಗೂ ಸಾಲ ಮನ್ನಾ ಲಾಭ ಸಿಗಲಿದೆ.

ಬೆಂಗಳೂರು: 1-2 ದಿನದ ಹಿಂದಷ್ಟೇ ಸಾಲ ಮರುಪಾವತಿ ಮಾಡಿದ್ದೀರಾ? ಈಗಿನ ಸಾಲ ಮನ್ನಾ ಯೋಜ ನೆಯ ಲಾಭ ನನಗೆ ಜಸ್ಟ್‌ ಮಿಸ್‌ ಆಯಿತು ಎಂದು ಕೈಕೈ ಹೊಸಕಿ ಕೊಳ್ಳುತ್ತಿದ್ದೀರಾ? ಚಿಂತೆ ಬೇಡ. ನಿಮಗೂ ಸಾಲ ಮನ್ನಾ ಲಾಭ ಸಿಗಲಿದೆ.

ಜೂ.20 ರವರೆಗಿನ ಸಾಲ ಮನ್ನಾ ಮಾಡಿ ರಾಜ್ಯ ಸರ್ಕಾರ ಇನ್ನೊಂದರೆಡು ದಿನದಲ್ಲಿ ಆದೇಶ ಹೊರಡಿಸಲಿದ್ದು, ಆ ಆದೇಶದಲ್ಲಿ ಜೂ.20ಕ್ಕೆ 1 ಅಥವಾ 2 ಅಥವಾ 3 ದಿನಗಳ ಮೊದಲು ಸಾಲ ಮರುಪಾವತಿ ಮಾಡಿರುವ ರೈತರಿಗೆ ಆ ಹಣವನ್ನು ವಾಪಸ್‌ ಮಾಡುವ ಬಗ್ಗೆ ಮಾಹಿತಿ ಇರಲಿದೆ ಎನ್ನಲಾಗಿದೆ.

ಸಾಲ ಮನ್ನಾ ಕುರಿತಂತೆ ಸರ್ಕಾರದ ಅಧಿಕೃತ ಆದೇಶ ಹೊರ ಬಿದ್ದ ಬಳಿಕವಷ್ಟೇ ಎಷ್ಟುದಿನ ಮೊದಲ ಸಾಲ ಮರುಪಾವತಿ ಮಾಡಿದವರಿಗೆ ಹಣ ವಾಪಸ್‌ ನೀಡಲಾಗುತ್ತದೆ ಎಂಬುದರ ಚಿತ್ರಣ ಸಿಗಲಿದೆ.