ಇದೊಂದು ಬೆಚ್ಚಿ ಬೀಳಿಸುವ ಸ್ಟೋರಿ. ವೇದಿಕೆಯಲ್ಲಿ ಮಾತನಾಡುತ್ತಿರುವಾಗಲೇ ನಿರೂಪಕಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ.

ಬೀಜಿಂಗ್(ಜು.31): ಇದೊಂದು ಬೆಚ್ಚಿ ಬೀಳಿಸುವ ಸ್ಟೋರಿ. ವೇದಿಕೆಯಲ್ಲಿ ಮಾತನಾಡುತ್ತಿರುವಾಗಲೇ ನಿರೂಪಕಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ.

26 ವರ್ಷದ ಜಾಂಗ್ ಹಾನ್ ಮೃತ ದುರ್ದೈವಿ. ಪ್ರಶಸ್ತಿ ಪ್ರದಾನ ಸಮಾರಂಭವೊಂದನ್ನು ನಡೆಸಿಕೊಡುತ್ತಿದ್ದ ನಿರೂಪಕಿ ಸಾವಿರಾರು ಪ್ರೇಕ್ಷಕರ ಎದುರಲ್ಲೇ ಇದ್ದಕ್ಕಿದ್ದಂತೆ ವೇದಿಕೆಯಲ್ಲೇ ಕುಸಿದು ಬೀಳುತ್ತಾರೆ. ಪ್ರೇಕ್ಷಕರು ಹೋಗಿ ನೋಡಿದಾಗ ನಿರೂಪಕಿ ಸಾವನ್ನಪ್ಪಿರೋದು ತಿಳಿದು ಬಂದಿದೆ.

ವೈದ್ಯರ ಪ್ರಕಾರ ಅವರು ಹಿಪೋಗ್ಲಿಸೇಮಿಯಾ ಹಾಗೂ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಈ ಲೈವ್ ಡೆತ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.