ಹಣಕ್ಕೆ ಬೆಲೆಯೇ ಇಲ್ಲದ ದೇಶಗಳಿವು
ಸ್ವೀಡನ್:
ಈ ದೇಶದಲ್ಲಿ ಶೇ. 90ಕ್ಕೂ ಹೆಚ್ಚು ಹಣಕಾಸು ವಹಿವಾಟು ನಡೆಯುವುದು ಆನ್'ಲೈನ್ ಮುಖಾಂತರ. ಕೇವಲ 2ರಿಂದ 3 ರಷ್ಟು ಮಂದಿ ಮಾತ್ರ ಹಣಕಾಸಿನ ಮೂಲಕ ವ್ಯವಹಾರ ನಡೆಸುತ್ತಾರೆ. ಜಗತ್ತಿನ ಅತಿ ಹೆಚ್ಚಿನ ನಗದುರಹಿತ ದೇಶ ಎಂಬ ಖ್ಯಾತಿಯನ್ನು ಸ್ವೀಡನ್ ಪಡೆದಿದೆ.
ಕೆನಡಾ:
ಶ್ರೀಮಂತ ದೇಶವಾದ ಕೆನಾಡದಲ್ಲೂ ವಹಿವಾಟುಗಳು ನಡೆಯುವುದು ಬ್ಯಾಂಕ್ ಮತ್ತು ಕ್ರೆಡಿಟ್ ಹಾಗೂ ಬ್ಯಾಂಕ್'ಗಳ ಮೂಲಕ. ಸದ್ಯ ಹಳೆಯ ನೋಟುಗಳು ಚಲಾವಣೆಯಲ್ಲಿದ್ದರೂ ಅವುಗಳಿಗೂ ಹಲವು ನೀತಿ ನಿಯಮ ವಿಧಿಸಲಾಗಿದೆ. ಹೊಸ ನೋಟುಗಳಿಗಂತೂ ಬೆಲೆಯೇ ಇಲ್ಲ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಶೇ. 100ರಷ್ಟು ನಗದುರಹಿತ ವ್ಯವಹಾರ ಸಂಪೂರ್ಣ ದೇಶದಾದ್ಯಂತ ನಡೆಯಲಿದೆ.
ಬೆಲ್ಜಿಯಂ:
ಈ ದೇಶದಲ್ಲಿಯೂ ಎಲ್ಲ ವ್ಯವಹಾರಗಳು ಡಿಜಿಟಲ್'ನಲ್ಲಿಯೇ ನಡೆಯಲಿವೆ. ನಾಗರಿಕರ ಖರ್ಚಿಗೂ ಸಹ ಪ್ರಸ್ತುತ ನಮ್ಮ ದೇಶದ ರೀತಿಯಲ್ಲಿಯೇ ಮಿತಿ ವಿಧಿಸಲಾಗಿದೆ. ಅಂದರೆ ಒಬ್ಬ ವ್ಯಕ್ತಿ ಗರಿಷ್ಠ 3 ಸಾವಿರ ಯೂರೋಗಳನ್ನು ಮಾತ್ರ ಪಾವತಿಸಬಹುದು.
ಫ್ರಾನ್ಸ್:
ಆನ್'ಲೈನ್ ಮೂಲಕ ಹೊಸ ವಿಧಾನಗಳನ್ನು ಅಳವಡಿಸಿಕೊಂಡ ಮೊದಲ ರಾಷ್ಟ್ರ ಫ್ರಾನ್ಸ್. ಇಲ್ಲಿ ಕೆಲವೇ ವರ್ಷಗಳಲ್ಲಿ ದೇಶದಾದ್ಯಂತ ನಗದುರಹಿತ ವಹಿವಾಟು ನಡೆಯಲು ಅಲ್ಲಿನ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಸ್ಪರ್ಶರಹಿತ ಕಾರ್ಡುಗಳ ಬಳಕೆಯಲ್ಲಿ ಈ ದೇಶ ಮುಂಚೂಣಿಯಲ್ಲಿದೆ.
ಸೋಮಾಲಿ ಲ್ಯಾಂಡ್:
ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಇದು ಸಹ ಇಂದು. ಆದರೆ ಈ ದೇಶದ ಎಲ್ಲ ವ್ಯವಹಾರಗಳು ಆನ್'ಲೈನ್ ಮೂಲಕವೇ ನಡೆಯುತ್ತವೆ. ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಇಲ್ಲಿನ ಆನ್'ಲೈನ್ ವ್ಯವಹಾರ ನಡೆಯುವುದು ಮೊಬೈಲ್ ಫೋನುಗಳ ಮೂಲಕ. ರಸ್ತೆಬದಿಯ ವ್ಯವಹಾರಗಳು ಕೂಡ ಮೊಬೈಲ್ ಮೂಲಕ ವಹಿವಾಟು ನಡೆಸುತ್ತಾರೆ ಎನ್ನುವುದು ಇಲ್ಲಿನ ವಿಶೇಷ.
ಕೀನ್ಯಾ:
ಆನ್'ಲೈನ್,ಮೊಬೈಲ್ ವಾಲೆಟ್ ಮೂಲಕ ಹೆಚ್ಚಿನ ವ್ಯವಹಾರಗಳನ್ನು ನಡೆಸುವ ಆಫ್ರಿಕಾದ ಇನ್ನೊಂದು ದೇಶ ಕೀನ್ಯಾ. ಬಿಲ್ಲುಗಳು, ಶಾಲಾ ಫೀಸ್ ಮೊದಲಾದ ಎಲ್ಲವೂ ನಗದುರಹಿತವಾಗಿಯೇ ನಡೆಯುತ್ತಿವೆ. ಇಲ್ಲಿ ಕ್ರಮೇಣ ನಗದು ವಿಧಾನವನ್ನು ಸ್ಥಗಿತಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತದೆ.
