ತುರ್ತು ಪರಿಸ್ಥಿತಿಯಲ್ಲಿ ಪ್ರಾಣ ಉಳಿಸುವ ಆ್ಯಂಬುಲೆನ್ಸ್'ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಘಟನೆ ಉತ್ತರ ಪ್ರದೇಶದ ಮೀರತ್'ನಲ್ಲಿ ನಡೆದಿದೆ.
ಲಕ್ನೋ (ಡಿ.26): ತುರ್ತು ಪರಿಸ್ಥಿತಿಯಲ್ಲಿ ಪ್ರಾಣ ಉಳಿಸುವ ಆ್ಯಂಬುಲೆನ್ಸ್'ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಘಟನೆ ಉತ್ತರ ಪ್ರದೇಶದ ಮೀರತ್'ನಲ್ಲಿ ನಡೆದಿದೆ.
ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿರುವ ಹಳೆಯ ವಿದ್ಯಾರ್ಥಿಗಳ ಸಭೆಗೆ ಈ ಮದ್ಯವನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೆಡಿಕಲ್ ಕಾಲೇಜಿನ ಹಳೆ ಬ್ಯಾಚ್ನ ವೈದ್ಯರು ಈ ಕಾರ್ಯಕ್ರಮದಲ್ಲಿ ಮದ್ಯದ ಜೊತೆ ಮನರಂಜನೆಗಾಗಿ ರಷ್ಯನ್ ಬೆಲ್ಲಿ ಡ್ಯಾನ್ಸರ್'ನನ್ನ ಆಹ್ವಾನಿಸಿದ್ದರು ಎಂದು ತಿಳಿದು ಬಂದಿದೆ. ಪ್ರಾಣ ಉಳಿಸೋ ವೈದ್ಯರೇ ತಮ್ಮ ಶೋಕಿಗಾಗಿ ಆ್ಯಂಬುಲೆನ್ಸ್'ನಲ್ಲಿ ಮದ್ಯ ಸಂಗ್ರಹಿಸಿರೋ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳೋದಾಗಿ ಪೊಲೀಸರು ತಿಳಿಸಿದ್ದಾರೆ.
