ಎಂಜಿ ರೋಡ್​ ಈ ಹೆಸರು ಕೇಳಿದರೆ ಸಾಕು ನಮ್ಮ ಕಣ್ಮುಂದೆ ಬರುವುದು ಅಲ್ಲಿನ ಕಲರ್​'ಫುಲ್​ ಪಬ್​'ಗಳು ಈ ರೋಡ್​ ಅಂದರೆ ಪಡ್ಡೆ ಹೈಕಳ್ಳಿಗೆ ಭಾರಿ ಇಷ್ಟ. ವೀಕೆಂಡ್​ ಆಚರಣೆ ಮಾಡಲು ಹೇಳಿ ಮಾಡಿಸಿದ ಸ್ಪಾಟ್​. ಆದರೆ, ಈ ಬಾರಿ ವೀಕೆಂಡ್​'ಗೆ ಕಿಕ್​ ಇಲ್ಲದ ಎಂಜಿ ರೋಡ್​, ಬ್ರೀಗೇಡ್​ ರೋಡ್​ ಬಿಕೋ ಎನ್ನುತ್ತಿದೆ.

ಬೆಂಗಳೂರು(ಜು.02): ಎಂಜಿ ರೋಡ್​ ಈ ಹೆಸರು ಕೇಳಿದರೆ ಸಾಕು ನಮ್ಮ ಕಣ್ಮುಂದೆ ಬರುವುದು ಅಲ್ಲಿನ ಕಲರ್​'ಫುಲ್​ ಪಬ್​'ಗಳು ಈ ರೋಡ್​ ಅಂದರೆ ಪಡ್ಡೆ ಹೈಕಳ್ಳಿಗೆ ಭಾರಿ ಇಷ್ಟ. ವೀಕೆಂಡ್​ ಆಚರಣೆ ಮಾಡಲು ಹೇಳಿ ಮಾಡಿಸಿದ ಸ್ಪಾಟ್​. ಆದರೆ, ಈ ಬಾರಿ ವೀಕೆಂಡ್​'ಗೆ ಕಿಕ್​ ಇಲ್ಲದ ಎಂಜಿ ರೋಡ್​, ಬ್ರೀಗೇಡ್​ ರೋಡ್​ ಬಿಕೋ ಎನ್ನುತ್ತಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿ ವ್ಯಾಪ್ತಿಯಲ್ಲಿನ ಬಾರ್'ಗಳಿಗೆ ಜೂನ್​ 30 ರ ರಾತ್ರಿಯೇ ಬೀಗ ಜಡಿಯಲಾಗಿದೆ. ಇದರಿಂದ ವೀಕೆಂಡ್ ಮೂಡ್'ನಲ್ಲಿದ್ದವರಿಗೆ ನಿರಾಸೆಯಾಗಿದೆ. ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಅಶೋಕ ನಗರ, ಹಲಸೂರು ಸೇರಿದಂತೆ ಅನೇಕ ಕಡೆಗಳಲ್ಲಿನ ಬಾರ್, ಪಬ್, ರೆಸ್ಟೋರೆಂಟ್ ಗಳು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಅಬಕಾರಿ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಇನ್ನು ವೀಕೆಂಡ್​ ಬಂದರೆ ತುಂಬಿ ತುಳುಕ್ಕುತ್ತಿದ್ದ ಎಂ ಜಿ ರೋಡ್​, ಬ್ರಿಗೇಡ್ ರಸ್ತೆ , ಈ ಬಾರಿ ವೀಕೆಂಡ್​ಗೆ ಜನ ಇಲ್ಲದೆ ಬಿಕೋ ಎನ್ನುತ್ತಿತು. ಪ್ರತಿ ವೀಕೆಂಡ್'​ಗೆ ಇಲ್ಲಿನ ಪಬ್​'ಗಳು ಸರಿಸುಮಾರು 2 ರಿಂದ 3 ಲಕ್ಷ ರೂಪಾಯಿ ಆದಾಯ ಪಕ್ಕಾ ಅಂತೆ.. ಆದ್ರೆ ಈ ಬಾರಿ ವೀಕೆಂಡ್​'ಗೆ ಐದು ಸಾವಿರ ರೂಪಾಯಿ ಕೂಡಾ ವ್ಯಾಪಾರ ಆಗಿಲ್ಲ ಅಂತಾರೆ ಪಬ್​ ಮ್ಯಾನೇಜರ್​..

ಸುಪ್ರೀಂ ಆದೇಶಕ್ಕೆ ಕೇವಲ ಬಾರ್​ ಅಷ್ಟೇ ಬಂದ್​ ಆಗಿಲ್ಲ, ಬಾರ್'​ಗಳಲ್ಲಿ ಕೆಲಸ ಮಾಡುವ ಸಾವಿರಾರು ಜನ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರತಿ ಬಾರ್​, ಪಬ್'​ನಲ್ಲಿ ಇಪ್ಪತ್ತರಿಂದ ಮೂವತ್ತು ಜನ ಕೆಲಸ ಮಾಡತ್ತಿದ್ದಾರೆ. ಆದರೆ, ಬಾರ್​ ಬಂದ್​'ನಿಂದ ಇವರು ಕೆಲಸವಿಲ್ಲದೆ ಖಾಲಿ ಕುಳಿತ್ತಿದ್ದಾರೆ.

ಒಟ್ಟಿನಲ್ಲಿ, ಈ ಬಾರಿಯ ವೀಕೆಂಡ್​ ಮಸಾಲೆ ಇಲ್ಲದ ಅಡುಗೆಯಾಗಿದೆ.