ಬಿಜೆಪಿ ನಾಯಕನ ಪುತ್ರನೊಬ್ಬ ದೇವಸ್ಥಾನದಲ್ಲಿ ಾಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಿದ್ದ ತಿಂಡಿ ಪ್ಯಾಕೆಟ್‌ನಲ್ಲಿ ಮದ್ಯ ಹಂಚಿರುವ ಪೋಟೋ ವೈರಲ್ ಆಗಿದೆ.

ಲಕ್ನೋ[ಜ.08]: ಬಿಜೆಪಿ ನಾಯಕ ನರೇಶ್ ಅಗರ್ ವಾಲ್ ಪುತ್ರ ದೇವಸ್ಥಾನವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಿದ್ದ ತಿಂಡಿಯ ಪ್ಯಾಕೆಟ್ನಲ್ಲಿ ಮದ್ಯ ಬಾಟಲ್‌ಗಳನ್ನೂ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ದೇವಸ್ಥಾನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನರೇಶ್ ಅಗರ್ವಾಲ್ ಕೂಡಾ ಭಾಗಿಯಾಗಿದ್ದರೆನ್ನಲಾಗಿದೆ.

ಉತ್ತರ ಪ್ರದೆಶದ ಹರ್ದೋಯಿಯಲ್ಲಿರುವ ದೇವಸ್ಥಾನದಲ್ಲಿ ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಕಾರ್ಯಕ್ರಮವೊಂದನ್ನು ಆಯೋಜಿಸಿ, ಭಾಗಿಯಾಗಿದ್ದರು. ತಂದೆ ಆಯೋಜಿಸಿದ್ದ ಕಾರ್ಯಕ್ರಮದ ಊಟದ ವ್ಯವಸ್ಥೆಯನ್ನು ಅವರ ಪುತ್ರನೇ ವಹಿಸಿಕೊಂಡಿದ್ದ, ಅಲ್ಲದೇ ಭಾಗಿಯಾದ ಜನರಿಗೆ ತಾನೇ ಖುದ್ದಾಗಿ ಇದನ್ನು ವಿತರಿಸಿದ್ದರು. ಸದ್ಯ ಸುದ್ದಿ ಏಜೆನ್ಸಿ ANI ಈ ಕಾರ್ಯಕ್ರಮದ ಕೆಲ ಫೋಟೋಗಳನ್ನು ಟ್ವೀಟ್ ಮಾಡಿದ್ದು, ಇವುಗಳಲ್ಲಿ ನರೇಶ್ ಪುತ್ರ ತಿಂಡಿ ಪ್ಯಾಕೆಟ್‌ಗಳೊಂದಿಗೆ ಮದ್ಯದ ಬಾಟಲ್‌ಗಳನ್ನೂ ವಿತರಿಸುತ್ತಿರುವುದು ಸ್ಪಷ್ಟವಾಗಿದೆ. 

Scroll to load tweet…

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಹರ್ದೋಯಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅಂಶುಲ್ ವರ್ಮಾ "ನಾನು ಈ ವಿಚಾರವನ್ನು ಪಕ್ಷದ ಹಿರಿಯರ ಗಮನಕ್ಕೆ ತರುತ್ತೇನೆ. ತಪ್ಪು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ" ಎಂದಿದ್ದಾರೆ. ಈ ವಿಚಾರವನ್ನು ಪತ್ರದ ಮುಕೇನ ಸಿಎಂ ಯೋಗಿ 

ಆದಿತ್ಯನಾಥ್ ಗಮನಕ್ಕೂ ತಂದಿರುವ ವರ್ಮಾ 'ಪಕ್ಷ ಯಾವ ಸಿದ್ಧಾಂತವನ್ನು ಪ್ರತಿನಿಧಿಸುತ್ತದೋ, ಅಗರ್ವಾಲ್ ಅದರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ' ಎಂದಿದ್ದಾರೆ.

Scroll to load tweet…

ಇನ್ನು ಬಿಜೆಪಿ ನಾಯಕ ನರೇಶ್ ಅಗರ್ ವಾಲ್ ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಮಾಡಿಕೊಳ್ಳುವುದಕ್ಕೆ ಅತ್ಯಂತ ಫೇಮಸ್ ಎನ್ನಲಾಗಿದೆ. ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ನಿವಾಸಿಯಾಗಿರುವ ಅಗರ್ ವಾಲ್ ಬರೋಬ್ಬರಿ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಪುತ್ರ ಕೂಡಾ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 38 ವರ್ಷದ ತನ್ನ ರಾಜಕೀಯ ವೃತ್ತಿಯಲ್ಲಿ ನರೇಶ್ ಅಗರ್ವಾವಾಲ್ 4 ಬಾರಿ ತಮ್ಮ ಪಕ್ಷ ಬದಲಾಯಿಸಿದ್ದಾರೆ. ಒಂದು ಬಾರಿ ತಮ್ಮದೇ ಸ್ವತಂತ್ರ ಪಕ್ಷವನ್ನೂ ರಚಿಸಿದ್ದರು.