Asianet Suvarna News Asianet Suvarna News

ಆಹಾರ ಅರಸುತ್ತಾ ಕಾಡಿನಿಂದ ನಾಡಿನೆಡೆ ಹೆಜ್ಜೆ ಹಾಕಿದ ಸಿಂಹಗಳು!

ಕಾಡಿನಿಂದ ನಾಡಿಗೆ ಬಂದ ಹಸಿದ ಸಿಂಹಗಳು| ಮಳೆ ನಡುವೆಯೂ ಆಹಾರ ಹುಡುಕುತ್ತಾ ರಸ್ತೆಗಳಲ್ಲಿ ಸಿಂಹಗಳ ಸಂಚಾರ| ಮೊಬೈಲ್‌ನಲ್ಲಿ ಸೆರೆಯಾಯ್ತು 7 ಸಿಂಹಗಳ ದೃಶ್ಯ

Lions take over the streets of Gujarat Watch spine chilling video
Author
Bangalore, First Published Sep 15, 2019, 3:30 PM IST

ಗಾಂಧೀನಗರ[ಸೆ.15]: ಗುಜರಾತ್ ನ ಜುನಾಗಢ್ ನಲ್ಲಿ ಶುಕ್ರವಾರ ತಡರಾತ್ರಿ 7 ಸಿಂಹಗಳು ಗುಂಪೊಂದು ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. 

ಗಿರ್ ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿ ಧಾಮದ ಸಮೀಪ ಈ ದೃಶ್ಯ ಕಂಡು ಬಂದಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಓರ್ವ ವ್ಯಕ್ತಿ ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಈ ಸಿಂಹಗಳ ಗುಂಪು ಭವನಾಥ್ ಕ್ಷೇತ್ರದ್ದೆಂದು ತಿಳಿದು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಮಳೆಯ ನಡುವೆಯೂ ಸಿಂಹಗಳು ಆಹಾರಕ್ಕಾಗಿ ಹುಡುಕಾಡುತ್ತಿರುವ ದೃಶ್ಯಗಳನ್ನು ನೋಡಬಹುದಾಗಿದೆ.

2015ರಲ್ಲಿ ಏಷ್ಯಾಟಿಕ್ ಲಯನ್ಸ್ ಗಣತಿಯನ್ವಯ ಗುಜರಾತ್ ನ ಸೌರಾಷ್ಟ್ರ ಕ್ಷೇತ್ರದ ಗಿರ್ ವನ್ಯಜೀವಿ ಅರಣ್ಯಧಾಮ ಹಾಗೂ ಆಸುಪಾಸಿನಲ್ಲಿ ಸುಮಾರು 523 ಸಿಂಹಗಳಿವೆ ಎನ್ನಲಾಗಿತ್ತು.

ಇನ್ನು ಜುನಾಗಢ್ ಸ್ಥಳೀಯರು ಸಿಂಹಗಳ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸದ್ಯ ಸಿಂಹಗಳನ್ನು ಮರಳಿ ಕಾಡಿಗೆ ಕರೆದೊಯ್ಯಲಾಗಿದೆ.
 

Follow Us:
Download App:
  • android
  • ios