ಲೋಕ ನೀತಿ ಫೌಂಡೇಶನ್ ಎಂಬ ಸ್ವಯಂಸೇವಾ ಸಂಸ್ಥೆ ಹೂಡಿದ ದಾವೆಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ಪ್ರಕಟಿಸಿತ್ತು.

ನವದೆಹಲಿ(ಸೆ.10): ನಿಮ್ಮ ಮೊಬೈಲ್ ಫೋನ್ ಸಿಮ್ ಕಾರ್ಡ್'ಗಳಿಗೆ ಆಧಾರ್ ಜೋಡಣೆ ಇನ್ನೂ ಮಾಡಿಲ್ಲವೆಂದಾದಲ್ಲಿ, ಬೇಗನೇ ಮಾಡಿಸಿಕೊಳ್ಳಿ.

ಮುಂದಿನ ವರ್ಷದ ಫೆ. 18ರೊಳಗೆ ಸಿಮ್ ಕಾರ್ಡ್'ಗೆ ಆಧಾರ್ ಜೋಡಣೆಯಾಗದ ಎಲ್ಲ ಫೋನ್ ನಂಬರ್'ಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಾನು ಆದೇಶ ನೀಡಿದ 1 ವರ್ಷದೊಳಗೆ ಮೊಬೈಲ್ ಫೋನ್ ನಂಬರ್'ಗಳಿಗೆ ಆಧಾರ್ ಜೋಡಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ತೀರ್ಪು ನೀಡಿತ್ತು.

ಲೋಕ ನೀತಿ ಫೌಂಡೇಶನ್ ಎಂಬ ಸ್ವಯಂಸೇವಾ ಸಂಸ್ಥೆ ಹೂಡಿದ ದಾವೆಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ಪ್ರಕಟಿಸಿತ್ತು.