Asianet Suvarna News Asianet Suvarna News

ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಮಿತಿ

ಮದುವೆಯಂಥ ಅದ್ಧೂರಿ ಕಾರ್ಯಕ್ರಮಗಳಲ್ಲಿ ಆಹಾರದ ಅಪವ್ಯಯ ಮತ್ತು ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕೋರ್ಟ್‌ ಡಿ.6ರಂದು ಕಳವಳ ವ್ಯಕ್ತಪಡಿಸಿತ್ತು. 

limiting number of guests, manage food wastage at weddings
Author
New Delhi, First Published Dec 12, 2018, 9:50 AM IST

ನವದೆಹಲಿ(ಡಿ.12): ವಿವಾಹ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಆಹಾರ ಅಪವ್ಯಯವಾಗದಂತೆ ತಡೆಯುವ ನಿಟ್ಟಿನಲ್ಲಿ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ದೆಹಲಿ ಸರ್ಕಾರ ತಿಳಿಸಿದೆ. 

ಮದುವೆಯಂಥ ಅದ್ಧೂರಿ ಕಾರ್ಯಕ್ರಮಗಳಲ್ಲಿ ಆಹಾರದ ಅಪವ್ಯಯ ಮತ್ತು ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕೋರ್ಟ್‌ ಡಿ.6ರಂದು ಕಳವಳ ವ್ಯಕ್ತಪಡಿಸಿತ್ತು. ಈ ಎಲ್ಲ ವಿಚಾರಗಳ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಹಾಗೂ ಸರ್ಕಾರದ ನಡುವಿನ ಸಭೆಯಲ್ಲಿ ಚರ್ಚಿಸಲಾಗಿದೆ. ಈ ವೇಳೆ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸುವುದರಿಂದ ಉತ್ತಮ ಗುಣಮಟ್ಟದ ಆಹಾರ ನೀಡಬಹುದು. 

ಅಲ್ಲದೆ, ಇದರಿಂದ ಕಾರ್ಯಕ್ರಮದ ಅತಿಥಿಗಳ ನಿಯಂತ್ರಣ ಮಾಡಬಹುದು. ಜೊತೆಗೆ, ಹಸಿದವರಿಗೆ ಕ್ಯಾಟರರ್‌ಗಳು ಮತ್ತು ಎನ್‌ಜಿಒಗಳ ಮೂಲಕ ಆಹಾರ ತಲುಪಿಸಬಹುದು ಎಂದು ಸುಪ್ರೀಂ ಪೀಠಕ್ಕೆ ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್‌ ಕುಮಾರ್‌ ದೇವ್‌ ತಿಳಿಸಿದ್ದಾರೆ.

Follow Us:
Download App:
  • android
  • ios