Asianet Suvarna News Asianet Suvarna News

ರೈಲು ಪ್ರಯಾಣಿಕರಿಗೆ ಹೊಸ ವರ್ಷದ ಗಿಫ್ಟ್!: ಸಿಗಲಿದೆ ಹೊಸ ಸೌಲಭ್ಯ!

ದಿನನಿತ್ಯ ರೈಲಿನಲ್ಲಿ ಪ್ರಯಾಣಿಸಿ ಕೆಲಸಕ್ಕೆ ಹೋಗುವವರಿದ್ದಾರೆ. ಕೆಲಸದ ಒತ್ತಡದ ನಡುವೆ ನಿಮಗೆ ಇತರ ಕೆಲಸಗಳಿಗೆ ಸಮಯ ನೀಡಲಾಗುತ್ತಿಲ್ಲಾ? ಹಾಗಾದ್ರೆ ಚಿಂತೆ ಬೇಡ. ನಿಮ್ಮ ಈ ಎಲ್ಲಾ ಚಿಂತೆಗಳನ್ನು ದೂರ ಮಾಡಬಲ್ಲ ಸೌಲಭ್ಯವೊಂದು ಭಾರತದಲ್ಲಿ 2019ರ ಜನವರಿಯಿಂದ ಜಾರಿಗೊಳ್ಳಲಿದೆ.

Like flights Western Railway to start onboard shopping for passengers from January
Author
New Delhi, First Published Dec 21, 2018, 9:31 AM IST

ನವದೆಹಲಿ[ಡಿ.21]: ಭಾರತೀಯ ರೈಲ್ವೆ ಸೇವೆಯನ್ನು ಉನ್ನತ ದರ್ಜೆಗೆ ಏರಿಸಲು ಶ್ರಮಿಸುತ್ತಿರುವ ಕೇಂದ್ರ ಸರ್ಕಾರ, ಭಾರತದ ರೈಲ್ವೆ ಹೊಸ ಟಚ್‌ ಕೊಡಲು ಮುಂದಾಗಿದೆ. ಇದರ ಪ್ರಕಾರ, ಮುಂದಿನ ವರ್ಷದ ಜನವರಿಯಿಂದ ಭಾರತದ ಕೆಲವು ರೈಲುಗಳಲ್ಲಿ ಪ್ರಯಾಣಿಕರು, ತಮ್ಮ ಪ್ರಯಾಣದ ಅವಧಿಯಲ್ಲೇ, ತಮಗೆ ಬೇಕಿರುವ ಸೌಂದರ್ಯ ವರ್ಧಕ ಉತ್ಪನ್ನಗಳು, ಫಿಟ್‌ನೆಸ್‌ ಹಾಗೂ ಅಡುಗೆ ಮನೆಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಬಹುದಾಗಿದೆ. ಈ ಮೂಲಕ ಭಾರತದ ಕೆಲವು ರೈಲುಗಳು ಶಾಪಿಂಗ್‌ ಮಾಲ್‌ಗಳ ರೂಪ ಪಡೆಯಲಿವೆ.

16 ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ 5 ವರ್ಷಗಳ ಕಾಲ ಸೌಂದರ್ಯವರ್ಧಕ, ಫಿಟ್‌ನೆಸ್‌ ಮತ್ತು ಕಿಚನ್‌ ಅಪ್ಲೈಯನ್ಸಸ್‌ ಸೇರಿ ಇತರ ವಸ್ತುಗಳ ಮಾರಾಟಕ್ಕೆ ಖಾಸಗಿ ಕಂಪನಿಯೊಂದಕ್ಕೆ ಮುಂಬೈ ವಿಭಾಗದ ಪಶ್ಚಿಮ ರೈಲ್ವೆ ಗುತ್ತಿಗೆ ನೀಡಿದೆ. ಆದರೆ, ಈ ಗುತ್ತಿಗೆ ಪಡೆದ ಕಂಪನಿಯು, ರೈಲುಗಳಲ್ಲಿ ಆಹಾರ ಪದಾರ್ಥಗಳು, ಸಿಗರೇಟು, ಗುಟ್ಕಾ ಅಥವಾ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.

Follow Us:
Download App:
  • android
  • ios