ಅರೋಪಿಗಳ ವಿರುದ್ದ ಒಟ್ಟು 35 ಕೊಲೆ ಪ್ರಕರಣ ದಾಖಲಾಗಿದೆ.

ಬೆಂಗಳೂರು(ನ.09): ದಂಡುಪಾಳ್ಯ ಗ್ಯಾಂಗ್'ನ ಐವರು ಆರೋಪಿಗಳಿಗೆ ವಿಶೇಷ ನ್ಯಾಯಲಯವು ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2000ರ ನವಂಬರ್'ನಲ್ಲೆ ಗೀತಾ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಶಿವನಗೌಡ ಅವರು ತೀರ್ಪು ಪ್ರಕಟಿಸಿದರು.ಡೊಡ್ಡಹನುಮ, ನಲ್ಲತಿಮ್ಮ ,ಮುನಿಕೃಷ್ಣ , ವೆಂಕಟೇಶ ಹಾಗೂ ಲಕ್ಷ್ಮಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಅರೋಪಿಗಳ ವಿರುದ್ದ ಒಟ್ಟು 35 ಕೊಲೆ ಪ್ರಕರಣ ದಾಖಲಾಗಿದೆ.