ಮದ್ಯದ ಜತೆಗೆ ಎನರ್ಜಿ ಡ್ರಿಂಕ್ಸ್ ಗಳನ್ನು ಬೆರೆಸಿ ಕುಡಿಯುವುದರಿಂದ ಅಪಾಯಕ್ಕೆ ದಾರಿ ಮಾಡಿಕೊಡಲಿದೆ

ವಿಸ್ಕಿ, ರಮ್ ಜತೆ ಸೋಡಾ ಮಿಕ್ಸ್ ಮಾಡಿ ಕುಡಿಯೋರಿದ್ದಾರೆ. ಆದರೆ, ಅಲ್ಲೇ ಆಗುವುದು ಯಡವಟ್ಟು. ಏಕೆ ಅಂತಿರಾ? ಮದ್ಯದ ಜತೆಗೆ ಎನರ್ಜಿ ಡ್ರಿಂಕ್ಸ್ ಗಳನ್ನು ಬೆರೆಸಿ ಕುಡಿಯುವುದರಿಂದ ಅಪಾಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ವಾಹನ ಅಪಘಾತ, ಜಗಳ, ಹೊಡೆದಾಟ ಮತ್ತಿತರ ಘಟನೆಗಳಿಗೆ ಬೆರಕೆ ಮಾಡಿದ ಮದ್ಯ ಸೇವೆನೆಯೇ ಕಾರಣ ಎಂದು ಕೆನಡಾದ ವಿಕ್ಟೋರಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. 1981ರಿಂದ 2016ರ ವರೆಗಿನ ಶಕ್ತಿವರ್ಧಕ ಪೇಯಗಳನ್ನು ಮತ್ತು ಆಲ್ಕೋಹಾಲ್‌ಗಳನ್ನು ವಿಶ್ಲೇಷಣೆ ನಡೆಸಿ ಈ ಸಂಗತಿಯನ್ನು ವರದಿಯಲ್ಲಿ ಪ್ರಕಟಿಸಿದ್ದಾರೆ. ಮದ್ಯವೊಂದೇ ಸೇವನೆ ಮಾಡುವುದರಿಂದ ಆಗುವ ಅಪಾಯಕ್ಕಿಂತ ಅದರ ಜತೆ ಎನರ್ಜಿ ಡ್ರಿಕ್ಸ್ ಮಿಕ್ಸ್ ಮಾಡುವುದರಿಂದ ಅಪಾಯ ಜಾಸ್ತಿಯಂತೆ.