ಕಾರಿನೊಳಗೆ ಸಲಿಂಗಕಾಮದಲ್ಲಿದ್ದ ಮಹಿಳೆಯರಿಗೆ ಕೊಟ್ಟ ಶಿಕ್ಷೆ ಏನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Sep 2018, 3:29 PM IST
LGBT rights: Malaysia women caned for attempting to have lesbian sex
Highlights

ಇಬ್ಬರು ಮಲೇಷಿಯಾದ ಮಹಿಳೆಯರು ಧಾರ್ಮಿಕ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಸಲಿಂಗ ಕಾಮ.., ಹೌದು ಕಾರಿನೊಳಗಡೆ ಸಲಿಂಗ ಕಾಮದಲ್ಲಿ ತೊಡಗಿದ್ದ ಮಹಿಳೆಯರು ಶಿಕ್ಷೆಗೆ ಗುರಿಯಾಗಿದ್ದಾರೆ.

ಕಾರಿನೊಳಗೆ ಸಲಿಂಗ ಕಾಮದಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರಿಗೆ ಶಿಕ್ಷೆ ವಿಧಿಸಿರುವ ಧಾರ್ಮಿಕ ಕೋರ್ಟ್ ಅವರನ್ನು ಬೆತ್ತದಿಂದ ಥಳಿಸಿದೆ. 22 ಮತ್ತು 32 ವರ್ಷದ ಇಬ್ಬರು ಮಹಿಳೆಯರನ್ನು ಸಾರ್ವಜನಿಕ ಸ್ಥಳದಲ್ಲೇ ಥಳಿಸಲಾಗಿದೆ. ಇದು ಈ ಬಗೆಹಯ ಪ್ರ ಪ್ರಥಮ ಪ್ರಕರಣ ಆಗಿದೆ ಎಂದು ಅಲ್ಲಿನ ಮಾಧ್ಯುಮಗಳು ವರದಿ ಮಾಡಿವೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನವ ಹಕ್ಕು ಹೋರಾಟಗಾರರು ಸಲಿಂಗ ಕಾಮ ಕಾನೂನು ಮತ್ತು ಧಾರ್ಮಿಕ ಎರಡು ನೆಲೆಗಟ್ಟಿನಲ್ಲಿ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಸುಮಾರು ನೂರು ಜನರ ಎದುರಿಗೆ ಮಹಿಳೆಯರನ್ನು ಥಳಿಸಲಾಗಿದೆ. ಮಲೆಷಿಯಾದಲ್ಲಿ ಎರಡು ಹಂತದ ಕಾನೂನು ವ್ಯವಸ್ಥೆ ಇದೆ. ಧಾರ್ಮಿಕ ಕಾನೂನುಗಳನ್ನು ಆಯಾ ಧರ್ಮಗಳಿಗೆ ಅನುಗುಣವಾಗಿ ಮಾಡಿಕೊಳ್ಳಲಾಗಿದೆ.

loader