ಆಮ್ ಆದ್ಮಿ ಸರ್ಕಾರವು ಸುಪ್ರೀಂ ಕೋರ್ಟ್ ನಿಯಮಗಳನ್ನು ಉಲ್ಲಂಘಿಸಿ ಜಾಹೀರಾತುಗಳಿಗೆ ಖರ್ಚು ಮಾಡಿರುವ ರೂ.97 ಕೋಟಿ ಹಣವನ್ನು ಪಕ್ಷದಿಂದ ಭರಿಸುವಂತೆ ಲೆ| ಗ| ಅನಿಲ್ ಬೈಜಲ್ ದೆಹಲಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ನವದೆಹಲಿ (ಮಾ.30): ದೆಹಲಿ ಮುನ್ಸಿಪಲ್ ಕಾರ್ಪೊರೇಶನ್'ಗಳಿಗೆ ಚುನಾವಣೆ ಕಾವು ಪಡೆದುಕೊಲ್ಳುತ್ತಿರುವಾಗಲೇ, ಆಮ್ ಆದ್ಮಿ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಈ ಹಿಂದೆ ನಿರ್ದಿಷ್ಟ ಜಾಹೀರಾತುಗಳಿಗೆ ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡಿರುವ ಹಣವನ್ನು ಆಮ್ ಆದ್ಮಿ ಪಕ್ಷದಿಂದ ಭರಿಸುವಂತೆ ದೆಹಲಿ ಲೆ| ಗ| ಅನಿಲ್ ಬೈಜಲ್ ಸೂಚಿಸಿದ್ದಾರೆ.
ಆಮ್ ಆದ್ಮಿ ಸರ್ಕಾರವು ಸುಪ್ರೀಂ ಕೋರ್ಟ್ ನಿಯಮಗಳನ್ನು ಉಲ್ಲಂಘಿಸಿ ಜಾಹೀರಾತುಗಳಿಗೆ ಖರ್ಚು ಮಾಡಿರುವ ರೂ.97 ಕೋಟಿ ಹಣವನ್ನು ಪಕ್ಷದಿಂದ ಭರಿಸುವಂತೆ ಲೆ| ಗ| ಅನಿಲ್ ಬೈಜಲ್ ದೆಹಲಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಸರ್ಕಾರಿ ಜಾಹೀರಾತುಗಳಲ್ಲಿನ ಅಂಶಗಳನ್ನು ಪರಿಶೀಲಿಸುವ ಸಮಿತಿಯು ದೆಹಲಿ ಮುಖ್ಯ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಕೆಲವು ಜಾಹೀರಾತುಗಳಿಗೆ ವ್ಯಯಿಸಲಾಗಿರುವ ಮೊತ್ತವನ್ನು ಪರಿಶೀಲಿಸಿ, ಅದಕ್ಕೆ ಸಂಬಂಧಿಸಿದ ರಾಜಕೀಯ ಪಕ್ಷದಿಂದಲೇ ಭರಿಸಲು ಹೇಳಿತ್ತು.
ಈ ಕುರಿತು ಸಂಬಂಧಪಟ್ಟ ರಾಜಕೀಯ ಪಕ್ಷಕ್ಕೆ ಮೊದಲು ಜಾಹೀರಾತುಗಳ ಪೂರ್ತಿ ವಿವರಗಳೊಂದಿಗೆ ನೋಟಿಸ್ ಜಾರಿಗೊಳಿಸಿ, 30 ದಿನಗಳೊಳಗೆ ಮೊತ್ತವನ್ನು ಪಾವತಿಸಲು ಸೂಚಿಸಲಾಗುವುದು ಎಂದು ಹೇಳಲಾಗಿದೆ.