ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಭದ್ರತಾಪಡೆಗಳು ಲಷ್ಕರೆ ತೊಯ್ಬಾ ಸಂಘಟನೆಯ ಮುಖ್ಯ ಕಮಾಂಡರ್’ನನ್ನು ಇಂದು ಹೊಡೆದುರುಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ  ಹಾಕ್ರಿಪೋರಾ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರು, ಪಾಕಿಸ್ತಾನದ ಅಬು ದುಜಾನ ಹಾಗೂ ಆತನ ಸಹವರ್ತಿಯನ್ನು ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ.

ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ): ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಭದ್ರತಾಪಡೆಗಳು ಲಷ್ಕರೆ ತೊಯ್ಬಾ ಸಂಘಟನೆಯ ಮುಖ್ಯ ಕಮಾಂಡರ್’ನನ್ನು ಇಂದು ಹೊಡೆದುರುಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹಾಕ್ರಿಪೋರಾ ಗ್ರಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರು, ಪಾಕಿಸ್ತಾನದ ಅಬು ದುಜಾನ ಹಾಗೂ ಆತನ ಸಹವರ್ತಿಯನ್ನು ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ.

ಈ ವಿಷಯವನ್ನು ಖಾತ್ರಿಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭದ್ರತಾ ಪಡೆಗಳ ಪಾಲಿಗೆ ಇದೊಂದು ಮಹತ್ವದ ಸಾಧನೆಯೆಂದು ಹೇಳಿದ್ದಾರೆ.

ಹತರಾದವರ ಮೃತದೇಹಗಳು ಇನ್ನೂ ವಶಪಡಿಕೊಳ್ಳಲಾಗಿಲ್ಲ. ಆ ಬಳಿಕ ವಿವರಗಳನ್ನು ಬಹಿರಂಗ ಪಡಿಸುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್.ಪಿ. ವೈದ್ ತಿಳಿಸಿದ್ದಾರೆ.

ಗುಂಡಿನ ಚಕಮಕಿ ಸಂದರ್ಭದಲ್ಲಿ ಕೆಲ ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಕಲ್ಲೆಸೆತ ನಡೆಸಿದ್ದಾರೆ ಎಂದು ಹೇಳಲಾಗಿದೆ.

ದುಜಾನ ಹತ್ಯೆಯಾಗುವ ಸುದ್ದಿಯನ್ನು ಸುದದ್ದಿವಾಹಿನಿಗಳು ಬಿತ್ತರಿಸಿದ ಬಳಿಕ ಕಲ್ಲೆಸೆತ ಆರಂಭವಾಯಿತೆಂದು ವರದಿಯಾಗಿದೆ.

(ಸಾಂದರ್ಭಿಕ ಚಿತ್ರ)