ಬಿಜೆಪಿ‌ ಪ್ರಧಾನ ಕಚೇರಿಯಲ್ಲಿ ಕಾನೂನು ಹಾಗೂ ಸಂಸದೀಯ ಪ್ರಕೋಷ್ಟದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.
ಬೆಂಗಳೂರು(ಡಿ.10): ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಾನೂನು ಹಾಗೂ ಸಂಸದೀಯ ಪ್ರಕೋಷ್ಟದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಮಾತನಾಡಿ, ಬೆಂಗಳೂರಿನ ಅಂಬೇಡ್ಕರ್ ಬೀದಿಯಲ್ಲಿ ಎರಡು ಕಟ್ಟಡಗಳಿವೆ. ಒಂದು ಕಲ್ಲಿನ ಕಟ್ಟಡ, ಇನ್ನೊಂದು ಕೆಂಪು ಕಟ್ಟಡ. ಕಲ್ಲಿನ ಕಟ್ಟಡದಲ್ಲಿರುವ ಹೃದಯವೂ ಕಲ್ಲಿನದು
ಅಂತ ಜನ ಮಾತಾಡಿಕೊಳ್ಳುತ್ತಾರೆ. ಅದೇ ರೀತಿ ಕೆಂಪು ಕಟ್ಟಡದಲ್ಲಿ ತೀರ್ಪು ಸಿಗುತ್ತಿದೆಯೇ ವಿನಃ ನ್ಯಾಯ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೂಡನಂಬಿಕೆಗಳ ವಿರೋಧಿ ಕಾಯ್ದೆ ತರಲು ಹೊರಟಿದೆ. ಈ ಕಾಯ್ದೆಯಲ್ಲಿ ಏನಿದೆ ಅಂತ ಅಧ್ಯಯನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಒತ್ತಾಯಿಸಿದ್ದಾರೆ.
