ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಐಟಿ ರೇಡ್ ದೇಶಾದ್ಯಂತ ಭಾರೀ ಸುದ್ದಿಯಾಗಿದೆ. ಇದರೊಂದಿಗೆ ಪವರ್ ಮಿನಿಸ್ಟರ್ ಹೈಕಮಾಂಡ್'ಗೆ ಕಪ್ಪ ಕೊಡುತ್ತಿದ್ದರು ಎನ್ನುವ ಸ್ಫೋಟಕ ಸತ್ಯ ಹೊರಬಿದ್ದಿದೆ. ಇದರ ಬೆನ್ನಲ್ಲೇ ಡಿಕೆಶಿಯವರ ರಕ್ಷಣೆಗಾಗಿ ಘಟಾನುಘಟಿ ಲಾಯರ್'ಗಳು ಮುಂದೆ ಬಂದಿದ್ದಾರೆ.

ಬೆಂಗಳೂರು(ಆ.04): ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಐಟಿ ರೇಡ್ ದೇಶಾದ್ಯಂತ ಭಾರೀ ಸುದ್ದಿಯಾಗಿದೆ. ಇದರೊಂದಿಗೆ ಪವರ್ ಮಿನಿಸ್ಟರ್ ಹೈಕಮಾಂಡ್'ಗೆ ಕಪ್ಪ ಕೊಡುತ್ತಿದ್ದರು ಎನ್ನುವ ಸ್ಫೋಟಕ ಸತ್ಯ ಹೊರಬಿದ್ದಿದೆ. ಇದರ ಬೆನ್ನಲ್ಲೇ ಡಿಕೆಶಿಯವರ ರಕ್ಷಣೆಗಾಗಿ ಘಟಾನುಘಟಿ ಲಾಯರ್'ಗಳು ಮುಂದೆ ಬಂದಿದ್ದಾರೆ.

ರಾಜ್ಯದ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಮೇಲಿನ ಐಟಿ ಕಾರ್ಯಚರಣೆಯಲ್ಲಿ ಭಾರೀ ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್​​ ನಾಯಕರು ಹೈಕಮಾಂಡ್​ಗೆ ಕಪ್ಪ ಕೊಡುತ್ತಿದ್ದಾರೆ ಅನ್ನೋ ಸಂಗತಿ ಬಯಲಾಗಿದೆ. ಮೊನ್ನೆ ಇಂಧನ ಸಚಿವ ಡಿಕೆ ಶಿವಕುಮಾರ್​ ಈಗಲ್ ಟನ್ ರೆಸಾರ್ಟ್​ಗೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ದಾಖಲೆ ಹರಿದು ಹಾಕಿದ್ರು. ಹರಿದು ಹಾಕಿದ ಆ ದಾಖಲೆಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ದಾಖಲೆಯನ್ನು ಪರಿಶೀಲಿಸಿದಾಗ ಅದರಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್​ ಹೈಕಮಾಂಡ್​ಗೆ 3 ಕೋಟಿ ಕಪ್ಪ ಕೊಟ್ಟಿರುವ ಬಗ್ಗೆ ಉಲ್ಲೇಖವಾಗಿದೆ. ಹೀಗಂತ ರಾಷ್ಟ್ರೀಯ ಸುದ್ದಿವಾಹಿನಿ ವರದಿ ಮಾಡಿದೆ.

ಇನ್ನೂ ಲೋಕಸಭೆಯಲ್ಲಿ ನಿನ್ನೆ ವಿತ್ತ ಸಚಿವ ಅರುಣ್ ಜೇಟ್ಲಿ ಡಿ.ಕೆ.ಶಿವಕುಮಾರ್ ಪೇಪರ್ ಹರಿದು ಹಾಕಿದ್ದರು ಎಂದು ಆರೋಪಿಸಿದ್ದರು.

ಚಕ್ರವ್ಯೂಹದಿಂದ ಹೊರಬರಲು ಡಿಕೆಶಿ ರೆಡಿ ಮಾಡಿದ್ದಾರೆ ರಣತಂತ್ರ

ಡಿಕೆಶಿಯವರ ಮೇಲೆ ಐಟಿ ದಾಳಿಗೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರು, ಡಿಕೆಶಿಯವರ ರಕ್ಷಣೆಗೆ ನಿಂತಿದ್ದಾರೆ. ಇದಕ್ಕಾಗಿ ಘಟಾನುಘಟಿ ವಕೀಲರ ತಂಡವನ್ನೇ ರಚಿಸಿ ಐಟಿ ವಿರುದ್ಧ ಕಾನೂನು ಸಮರಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇನ್ನು, ಈ ಲೀಗಲ್ ಟೀಂನಲ್ಲಿ ಯಾರೆಲ್ಲಾ ಇರ್ತಾರೆ?

ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ಹಿರಿಯ ವಕೀಲರಾದ ಕಪಿಲ್ ಸಿಬಲ್ ನೇತೃತದ ಲೀಗಲ್ ಟೀಂನಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಆಗಿರುವ ಉದಯ್ ಹೊಳ್ಳ, ಖ್ಯಾತ ವಕೀಲರಾದ ಅಜ್ಮತ್ ಪಾಷಾ ಸೇರಿದಂತೆ ಐವರು ವಕೀಲರ ತಂಡವನ್ನ ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು, ಮತ್ತೊಂದು ಮೂಲಗಳ ಪ್ರಕಾರ, ಐಟಿ ಅಧಿಕಾರಿಗಳ ಕಾರ್ಯಾಚರಣೆ ಮುಕ್ತಾಯವಾಗುತ್ತಿದ್ದಂತೆ ಐಟಿ ಅಧಿಕಾರಿಗಳು ನೀಡುವ ಮಾಹಿತಿ ಆಧರಿಸಿ ಡಿಕೆಶಿ ವಿರುದ್ಧ ಎಫ್ ಐಆರ್ ದಾಖಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.