ರಾಜಕೀಯದಲ್ಲಿ ಎಡ, ಬಲ ಅಂತ ಗುದ್ದಾಡೋದು ಕಾಮನ್​​. ಆದ್ರೆ ಅದೇ ಎಡ ಬಲ ಸಂಘರ್ಷ ರಂಗಭೂಮಿಯಲ್ಲಿ ಕೇಳಿಬಂದರೆ ಹೇಗಿರುತ್ತೆ.? ಹೌದು ಈಗ ನಾಟಕ ಅಕಾಡೆಮಿ ಪ್ರಶಸ್ತಿ ಫಲಕ ವಿಚಾರಕ್ಕೆ ಎಡ ಬಲ ವಾರ್ ಶುರುವಾಗಿದೆ.

ಬೆಂಗಳೂರು (ಫೆ.02): ರಾಜಕೀಯದಲ್ಲಿ ಎಡ, ಬಲ ಅಂತ ಗುದ್ದಾಡೋದು ಕಾಮನ್​​. ಆದ್ರೆ ಅದೇ ಎಡ ಬಲ ಸಂಘರ್ಷ ರಂಗಭೂಮಿಯಲ್ಲಿ ಕೇಳಿಬಂದರೆ ಹೇಗಿರುತ್ತೆ.? ಹೌದು ಈಗ ನಾಟಕ ಅಕಾಡೆಮಿ ಪ್ರಶಸ್ತಿ ಫಲಕ ವಿಚಾರಕ್ಕೆ ಎಡ ಬಲ ವಾರ್ ಶುರುವಾಗಿದೆ.

ನಾಟಕ ಅಕಾಡೆಮಿಯಿಂದ ನಟರಾಜನಿಗೆ ಗೇಟ್​ ಪಾಸ್​..?

ನಾಟ್ಯ, ನಾಟಕ ಅಂದಾಕ್ಷಣ ಥಟ್​ ಅಂತ ತಲೆಗೆ ಬರೋದೆ ನಟರಾಜ. ನಟರಾಜನೇ ರಂಗಭೂಮಿಯ ಆರಾಧ್ಯ ದೈವ. ಪ್ರತಿ ವರ್ಷ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಟರಾಜನಿದ್ದ ಪ್ರಶಸ್ತಿ ಫಲಕ ನೀಡಿ ಸನ್ಮಾನ ಮಾಡುತ್ತಿತ್ತು. ಆದ್ರೆ ಈ ವರ್ಷ ನಾಟಕ ಅಕಾಡೆಮಿಯೇ ನಾಟಕವಾಡುತ್ತಿದೆ. ನಟರಾಜನ ಬದಲಿಗೆ ಬೇರೊಂದು ಅಮೂರ್ತ ಆಕೃತಿಯನ್ನು ಪ್ರಶಸ್ತಿಯಾಗಿ ನೀಡಲು ಮುಂದಾಗಿದೆ. ನಟರಾಜನ ಮೂರ್ತಿ ಬದಲಿಗೆ ಸುದೇಶ್​​ ಮಹಾನ್​ ಎಂಬ ಕಲಾವಿದನ ಅಮೂರ್ತ ಕಲಾಕೃತಿಯೊಂದನ್ನು ನೀಡಲು ಮುಂದಾಗಿದೆ. ನಟರಾಜನಿಗಿಂತ ಶ್ರೇಷ್ಠವಾದದ್ದನ್ನು ಫಲಕವಾಗಿಸಿದ್ದರೆ ಒಪ್ಪಬಹುದಿತ್ತೇನೋ ಆದ್ರೆ ಪರಂಪರೆಯಿಲ್ಲದ ಯಾವುದನ್ನೋ ಪ್ರಶಸ್ತಿಯನ್ನಾಗಿಸೋದು ಅರ್ಥಹೀನ ಅನ್ನೋದು ಕಲಾವಿದರ ಮಾತು. ಇದು ಎಡ ಪಂಥೀಯ ಸಿದ್ಧಾಂತವನ್ನು ಬಲವಂತವಾಗಿ ರಂಭೂಮಿಯ ಮೇಲೆ ಹೇರುವ ಕಾರ್ಯ ಅನ್ನೋ ಆರೋಪವೂ ಕೇಳಿ ಬಂದಿದೆ.

ಒಟ್ಟಿನಲ್ಲಿ ಪ್ರಶಸ್ತಿ ಸ್ಮರಣಿಕೆ ಬದಲಾವಣೆ ಹಿಂದೆ ರಾಜ್ಯ ಸರ್ಕಾರದ ಎಡಪಂಥಿಯ ಚಿಂತನೆಯೇ ಕಾರಣವಾ ಅನ್ನೋ ಪ್ರಶ್ನೆ ಕೂಡ ಉದ್ಭವಿಸಿದೆ