ಸಚಿವ ಜಯಚಂದ್ರ ಭೇಟಿ ಮಾಡಿದ ಹಿರಿಯ ನಟಿ ಲೀಲಾವತಿ, ಪುತ್ರ

news | Wednesday, January 24th, 2018
Suvarna Web Desk
Highlights

ಸೋಲದೇವನಹಳ್ಳಿ ಬಳಿಯ ಬೀದನ ಪಾಳ್ಯ ಬಳಿ ನಿರಂತರವಾಗಿ ಹರಿಯತ್ತಿರುವ ನದಿ ನೀರಿನಿಂದ ಜನರು ಸಂಚರಿಸಲು ಕಷ್ಟವಾಗುತ್ತಿರುವು ದರಿಂದ ಅಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವಂತೆ ಹಿರಿಯ ಕಲಾವಿದೆ ಲೀಲಾವತಿ ಮತ್ತು ಪುತ್ರ ವಿನೋದ್‌ರಾಜ್ ಅವರು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು (ಜ.24): ಸೋಲದೇವನಹಳ್ಳಿ ಬಳಿಯ ಬೀದನ ಪಾಳ್ಯ ಬಳಿ ನಿರಂತರವಾಗಿ ಹರಿಯತ್ತಿರುವ ನದಿ ನೀರಿನಿಂದ ಜನರು ಸಂಚರಿಸಲು ಕಷ್ಟವಾಗುತ್ತಿರುವುದರಿಂದ ಅಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವಂತೆ ಹಿರಿಯ ಕಲಾವಿದೆ ಲೀಲಾವತಿ ಮತ್ತು ಪುತ್ರ ವಿನೋದ್‌ರಾಜ್ ಅವರು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಮನವಿ ಮಾಡಿದ್ದಾರೆ.

 ಮಂಗಳವಾರ ವಿಧಾನಸೌಧದಲ್ಲಿ ಸಚಿವ ರನ್ನು ಭೇಟಿ ಮಾಡಿದ ಅವರು, ಇತ್ತೀಚೆಗೆ ನದಿ ದಾಟುತ್ತಿದ್ದ ವೇಳೆ ಇಬ್ಬರು ಯುವಕರು ಮೃತ ಪಟ್ಟಿದ್ದಾರೆ.  ಹಾಗಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವಂತೆ ಮನವಿ ಮಾಡಿದರು. 1 ಕೋಟಿ ಯೋಜನೆ ಮಂಜೂರಾಗಿದೆ ಎಂದು ಸಚಿವರು ತಿಳಿದರು.

Comments 0
Add Comment

    ನಾಳೆ ಕರ್ನಾಟಕ ಬಂದ್ : ಏನಿರುತ್ತೆ, ಏನಿಲ್ಲ, ಯಾರು ಬೆಂಬಲ, ಯಾರಿಲ್ಲ

    karnataka-assembly-election-2018 | Sunday, May 27th, 2018