Asianet Suvarna News Asianet Suvarna News

RSS ಕಾರ್ಯಕರ್ತರನ್ನು ನೋಡಿ ಕಲಿಯಿರಿ: ಪಕ್ಷದ ಕಾರ್ಯಕರ್ತರಿಗೆ ಪವಾರ್ ಸಲಹೆ!

RSS ಕಾರ್ಯಕರ್ತರ ನಿಷ್ಠೆ ಹಾಗೂ ದಕ್ಷತೆ ಕೊಂಡಾಡಿದ NCP ಅಧ್ಯಕ್ಷ ಶರದ್ ಪವಾರ್| RSS ಕಾರ್ಯಕರ್ತರು ತೋರುವ ನಿಷ್ಠೆ ಹಾಗೂ ಸಂವಹನ ಕೌಶಲ್ಯವನ್ನು ಕಲಿತುಕೊಳ್ಳುವಂತೆ ತನ್ನ ಪಕ್ಷದ ಕಾರ್ಯಕರ್ತರಿಗೆ ಸಲಹೆ 

Learn persistence, patience and consistency from RSS Sharad Pawar tells NCP cadre
Author
Bangalore, First Published Jun 7, 2019, 4:40 PM IST

ಮುಂಬೈ[ಜೂ.07]:NCP ಅಧ್ಯಕ್ಷ ಶರದ್ ಪವಾರ್ RSS ಕಾರ್ಯಕರ್ತರ ನಿಷ್ಠೆ ಹಾಗೂ ದಕ್ಷತೆಯನ್ನು ಕೊಂಡಾಡಿದ್ದಾರೆ. ಅಲ್ಲದೇ RSS ಕಾರ್ಯಕರ್ತರು ತೋರುವ ನಿಷ್ಠೆ ಹಾಗೂ ಸಂವಹನ ಕೌಶಲ್ಯವನ್ನು ಕಲಿತುಕೊಳ್ಳುವಂತೆ ತನ್ನ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ಪುಣೆಯ ಪಿಂಪ್ರಿ ಚಿಂಚ್ವಾಡ್ಡ್‌ನಲ್ಲಿ ಆಯೋಜಿಸಲಾಗಿದ್ದ NCP ಕಾರ್ಯಕರ್ತರ ಶಿಬಿರದಲ್ಲಿ ಮಾತನಾಡಿದ ಪವಾರ್ 'ನಮ್ಮ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕೆ ಹೋದಾಗ ಒಂದು ವೇಳೆ ಯಾವುದಾದರು ಮನೆ ಬಾಗಿಲು ಮುಚ್ಚಿದ್ದರೆ, ಬಾಗಿಲ ಬಳಿ ಕರಪತ್ರವನ್ನು ಹಾಕಿ ಮರಳುತ್ತಾರೆ. ಆದರೆ ಇದೇ ಕೆಲಸ RSS ಕಾರ್ಯಕರ್ತರಿಗೆ ನೀಡಿದರೆ ಹಾಗಾಗುವುದಿಲ್ಲ. RSS ಕಾರ್ಯಕರ್ತನೊಬ್ಬನಿಗೆ ಒಂದು ವಾರ್ಡ್ ಜವಾಬ್ದಾರಿ ನೀಡಿದರೆ ಆ ವಾರ್ಡ್ ನ ಎಲ್ಲಾ ಮನೆಗಳಿಗೆ ಖುದ್ದು ಭೇಟಿ ನೀಡುತ್ತಾನೆ. ಒಂದು ವೇಳೆ ಮನೆಗೆ ಬಾಗಿಲು ಹಾಕಿದ್ದರೆ, ಸಂಜೆ ಮತ್ತೆ ಆ ಮನೆಗೆ ಭೇಟಿ ಕೊಡುತ್ತಾನೆ. ಆಗಲೂ ಭೇಟಿ ಸಾಧ್ಯವಾಗದಿದ್ದರೆ, ಮರುದಿನ ಬೆಳಿಗ್ಗೆ ಮನೆಯ ಸದಸ್ಯರನ್ನು ಭೇಟಿಯಾಗುತ್ತಾನೆ. ಈ ನಿಷ್ಠೆಯನ್ನು ಕಲಿತುಕೊಳ್ಳಬೇಕು' ಎಂದು NCP ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

RSS ಹಾಗೂ ನಮ್ಮ ಸಿದ್ಧಾಂತಗಳಲ್ಲಿ ವ್ಯತ್ಯಾಸಗಳಿವೆ. ಆದರೆ ನಾವು ಅವರಿಂದ ಕಲಿತುಕೊಳ್ಳುವುದು ಬಹಳಷ್ಟಿದೆ. ಹೀಗಾಗಿ ನಾವು ಸಾರ್ವಜನಿಕ ಸಂಪರ್ಕ ಅಭಿವೃದ್ದಿಗೊಳಿಸುವ, ನಿಷ್ಠೆಯ ಕೌಶಲ್ಯವನ್ನು ಅವರಿಂದ ಕಲಿತುಕೊಳ್ಳಬೇಕು ಎಂದು ಪವಾರ್ ತಿಳಿಸಿದ್ದಾರೆ

Follow Us:
Download App:
  • android
  • ios