Asianet Suvarna News Asianet Suvarna News

ಐಟಿ ವರರಿಗೆ ಈಗ ಬೇಡಿಕೆಯೇ ಇಲ್ಲವಂತೆ! ಹೆಣ್ಣು ಕೊಡಲು ಹಿಂಜರಿಯುತ್ತಿರುವ ಕುಟುಂಬಗಳು

ಹೀಗಾಗಿ ಮದುವೆ ವಿಷಯದಲ್ಲಿ, ಅದರಲ್ಲೂ ಮುಖ್ಯವಾಗಿ ವ್ಯವಸ್ಥಿತ ವಿವಾಹಗಳಲ್ಲಿ ಸಾಫ್ಟ್ವೇರ್ ವೃತ್ತಿಪರರ ಬೇಡಿಕೆ ಕುಸಿದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇತ್ತೀಚೆಗೆ ಕೆಲವು ವಿವಾಹ ಹೊಂದಾಣಿಕೆ ವೆಬ್ಸೈಟ್ಗಳಲ್ಲಿ ನೀಡಲಾದ ಜಾಹೀರಾತುಗಳಲ್ಲಿ, ವಧುವಿಗೆ ಐಎಎಸ್/ಐಪಿಎಸ್, ಡಾಕ್ಟರ್, ಉದ್ಯಮಿ ವರರು ಆದ್ಯತೆಯ ಆಯ್ಕೆಯಾಗಿದ್ದಾರೆ

Layoffs in IT sector lead to a dip in popularity of software engineers

ಮುಂಬೈ/ನವದೆಹಲಿ(ಜು.08): ಒಂದು ಸಂದರ್ಭ ಮದುವೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದ ಐಟಿ ಎಂಜಿನಿಯರ್ ವರರನ್ನು ಈಗ ಕೇಳುವವರೇ ಇಲ್ಲ ಎನ್ನುವಂತಹ ಸ್ಥಿತಿಯಿದೆ ಎನ್ನಲಾಗುತ್ತಿದೆ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳು ಮಾತ್ರವಲ್ಲ, ಸಾಂಪ್ರದಾಯಿಕ ಮದುವೆ ಹೊಂದಾಣಿಕೆದಾರರಲ್ಲೂ ಐಟಿ ಎಂಜಿನಿಯರ್‌ಗಳ ಬೇಡಿಕೆ ಕುಸಿದಿದೆ. ಐಟಿ ವಲಯದಲ್ಲಿ ಉದ್ಯೋಗ ಕಡಿತ, ಉದ್ಯೋಗ ಅಭದ್ರತೆ ಇದಕ್ಕೆ ಕಾರಣವಾಗಿದೆ ಎಂದು ವರದಿಯೊಂದು ಹೇಳಿದೆ.

ಬೆಂಗಳೂರು ಐಟಿ ತವರೂರಾಗಿರುವ ಕಾರಣ ಇಂಥ ಒಂದು ಹೊಸ ಬೆಳವಣಿಗೆಯು ಮಹತ್ವ ಪಡೆದಿದೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತದ ಐಟಿ ವಲಯದಲ್ಲಿ ಸಾಕಷ್ಟು ಉದ್ಯೋಗ ಅಭದ್ರತೆ ಕಾಡತೊಡಗಿದೆ. ಹೀಗಾಗಿ ಮದುವೆ ವಿಷಯದಲ್ಲಿ, ಅದರಲ್ಲೂ ಮುಖ್ಯವಾಗಿ ವ್ಯವಸ್ಥಿತ ವಿವಾಹಗಳಲ್ಲಿ ಸಾಫ್ಟ್‌ವೇರ್ ವೃತ್ತಿಪರರ ಬೇಡಿಕೆ ಕುಸಿದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇತ್ತೀಚೆಗೆ ಕೆಲವು ವಿವಾಹ ಹೊಂದಾಣಿಕೆ ವೆಬ್‌ಸೈಟ್‌ಗಳಲ್ಲಿ ನೀಡಲಾದ ಜಾಹೀರಾತುಗಳಲ್ಲಿ, ವಧುವಿಗೆ ಐಎಎಸ್/ಐಪಿಎಸ್, ಡಾಕ್ಟರ್, ಉದ್ಯಮಿ ವರರು ಆದ್ಯತೆಯ ಆಯ್ಕೆಯಾಗಿದ್ದಾರೆ. ಕೆಲವು ಜಾಹೀರಾತುಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಫೋನ್ ಮಾಡುವುದೇ ಬೇಡ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

2017ರ ಆರಂಭದಿಂದ ಐಟಿ ವರರಿಗಾಗಿ ಬೇಡಿಕೆ ಸಲ್ಲಿಸುವ ವಧುಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಕಳೆದ ನವೆಂಬರ್‌ನಿಂದಲೇ ಅಮೆರಿಕದಲ್ಲಿ ವಾಸವಿರುವ ವರರ ಬೇಡಿಕೆಯೂ ಕುಸಿದಿದೆ ಎಂದು ಶಾದಿ.ಕಾಂನ ಸಿಇಒ ಗೌರವ್ ರಕ್ಷಿತ್ ಹೇಳುತ್ತಾರೆ. ಅಮೆರಿಕ ಮೂಲದ ವರರ ಬೇಡಿಕೆ ಕುಸಿದಿರುವುದು ಹೌದು ಎಂದು ಜೀವನ್‌ಸಾಥಿ.ಕಾಂನ ಹಿರಿಯ ಉಪಾಧ್ಯಕ್ಷ ರೋಹನ್ ಮಾಥುರ್ ಕೂಡ ಹೇಳುತ್ತಾರೆ.

Follow Us:
Download App:
  • android
  • ios