ಋತುಚಕ್ರದ ಬಗ್ಗೆ ಪದ್ಯ ಬರೆದ ಯುವತಿಗೆ ಬಲಪಂಥೀಯ ಸಂಘಟನೆಗಳ ಬೆದರಿಕೆ

First Published 25, Feb 2018, 5:24 PM IST
Law Student Bullied For Facebook Post On Menstrual Taboo
Highlights

ಕೇರಳದಲ್ಲಿ ಕಾನೂನು ವಿದ್ಯಾರ್ಥಿಯೋರ್ವಳು ತನ್ನ ಫೇಸ್’ಬುಕ್ ಪುಟದಲ್ಲಿ ಋತುಚಕ್ರದ ಬಗ್ಗೆ ಪದ್ಯವೊಂದನ್ನು ಬರೆದು ಹಾಕಿದ್ದಕ್ಕೆ ಬಲಪಂಥೀಯ ಸಂಘನೆಗಳು ಬೆದರಿಕೆ ಒಡ್ಡಿದ ಪ್ರಕರಣ ಕೇರಳದಲ್ಲಿ ನಡೆದಿದ್ದು, ಈ ಸಂಬಂಧ ಆಕೆ ದೂರು ದಾಖಲು ಮಾಡಿದ್ದಾಳೆ.

ತಿರುವನಂತಪುರಂ : ಕೇರಳದಲ್ಲಿ ಕಾನೂನು ವಿದ್ಯಾರ್ಥಿಯೋರ್ವಳು ತನ್ನ ಫೇಸ್’ಬುಕ್ ಪುಟದಲ್ಲಿ ಋತುಚಕ್ರದ ಬಗ್ಗೆ ಪದ್ಯವೊಂದನ್ನು ಬರೆದು ಹಾಕಿದ್ದಕ್ಕೆ ಬಲಪಂಥೀಯ ಸಂಘನೆಗಳು ಬೆದರಿಕೆ ಒಡ್ಡಿದ ಪ್ರಕರಣ ಕೇರಳದಲ್ಲಿ ನಡೆದಿದ್ದು, ಈ ಸಂಬಂಧ ಆಕೆ ದೂರು ದಾಖಲು ಮಾಡಿದ್ದಾಳೆ.

ಈ ಪದ್ಯ ಹಾಕಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಆಕೆ ಹೇಳಿದ್ದಾರೆ. ಮಲ್ಲಪಲ್ಲಿಯ 18 ವರ್ಷದ ಯುವತಿ ನವಮಿ ರಾಮಚಂದ್ರನ್ ಈ ರೀತಿಯಾಗಿ ದೂರನ್ನು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೇ ತನಗೆ ಬೆದರಿಕೆ ಒಡ್ಡಲಾಗಿದೆ ಎಂದು ಆಕೆ ಹೇಳಿದ್ದಾರೆ. ಈ ಪದ್ಯಕ್ಕೆ ಬೆಂಬಲ ನೀಡಿದ ಇನ್ನೋರ್ವ ವಿದ್ಯಾರ್ಥಿನಿಗೂ ಕೂಡ ಇದೇ ರೀತಿ ಬೆದರಿಕೆಯನ್ನು ಒಡ್ಡಲಾಗಿದೆ.

loader