ರೈಲು ತಡವಾಗಿ ಬಂದರೆ ಅಧಿಕಾರಿ ಬಡ್ತಿಗೆ ಬೀಳುತ್ತೆ ಕತ್ತರಿ

First Published 4, Jun 2018, 7:54 AM IST
Late Running Trains? Will Cancel Promotion Of Officials, Minister Warns
Highlights

ಸಾಮಾನ್ಯವಾಗಿ ರೈಲುಗಳು ಸಮಯಕ್ಕೆ ಸರಿಯಾಗಿ ಹೊರಡದಿರುವ, ವಿಳಂಬವಾಗಿ ತಲುಪುವ ದೂರುಗಳು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಆದರೆ, ಇನ್ನುಮುಂದೆ ರೈಲುಗಳು ವಿಳಂಬವಾಗಿ ಹೊರಟರೆ ರೈಲ್ವೆ ಸಿಬ್ಬಂದಿಯ ಬಡ್ತಿಗೇ ಕತ್ತರಿಬೀಳುವ ಸಾಧ್ಯತೆ ಇದೆ. ಇಂತಹ ಒಂದು ಗಂಭೀರ ಎಚ್ಚರಿಕೆಯನ್ನು ರೈಲ್ವೆ ಸಚಿವ ಪೀಯೂಶ್ ಗೋಯಲ್ ಅಧಿಕಾರಿಗಳಿಗೆ ನೀಡಿದ್ದಾರೆ.

ನವದೆಹಲಿ (ಜು. 04): ಸಾಮಾನ್ಯವಾಗಿ ರೈಲುಗಳು ಸಮಯಕ್ಕೆ ಸರಿಯಾಗಿ ಹೊರಡದಿರುವ, ವಿಳಂಬವಾಗಿ ತಲುಪುವ ದೂರುಗಳು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಆದರೆ, ಇನ್ನುಮುಂದೆ ರೈಲುಗಳು ವಿಳಂಬವಾಗಿ ಹೊರಟರೆ ರೈಲ್ವೆ ಸಿಬ್ಬಂದಿಯ ಬಡ್ತಿಗೇ ಕತ್ತರಿಬೀಳುವ ಸಾಧ್ಯತೆ ಇದೆ. ಇಂತಹ ಒಂದು ಗಂಭೀರ ಎಚ್ಚರಿಕೆಯನ್ನು ರೈಲ್ವೆ ಸಚಿವ ಪೀಯೂಶ್ ಗೋಯಲ್ ಅಧಿಕಾರಿಗಳಿಗೆ ನೀಡಿದ್ದಾರೆ.

ಕಳೆದ ವಾರ ನಡೆದ ಆಂತರಿಕ ಸಭೆಯೊಂದರಲ್ಲಿ ಮಾತನಾಡಿದ ಗೋಯಲ್, ತಮ್ಮ ತಮ್ಮ ವಲಯಗಳಲ್ಲಿ ರೈಲ್ವೆ ಸೇವೆ ವಿಳಂಬವಾದರೆ, ಬಡ್ತಿ ಅವಕಾಶಕ್ಕೆ ತೊಂದರೆಯಾಗ ಲಿದೆ ಎಂದು ಎಲ್ಲ ರೈಲ್ವೆ ವಲಯಗಳ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ಹಿರಿಯ ಅಧಿಕಾರಿ ಗಳನ್ನು ರೈಲು ವಿಳಂಬ ದೂರುಗಳ ಬಗ್ಗೆ ತರಾಟೆಗೆ ತೆಗೆದುಕೊಂಡ ಸಚಿವರು, ನಿರ್ವಹಣೆ ಕಾರಣ ನೀಡಿ ರೈಲು ವಿಳಂಬ ಆಗುವಂತಿಲ್ಲ. ಸಮಯಕ್ಕೆ ಸರಿಯಾಗಿ ರೈಲುಗಳು ಹೊರಡಲು ಮತ್ತು ತಲುಪಲು ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ. 

loader