ಪೊಲೀಸರು ಈ ಮೂವರನ್ನು ಬಂಧಿಸುವ ಮುನ್ನ ಸುಮಾರು ಒಂದೂವರೆ ಗಂಟೆ ಕಾಲ ಚೇಸ್ ಮಾಡಬೇಕಾಗುತ್ತದೆ. ಏಪ್ರಿಲ್ 14ರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ನಾಗ ಹಾಗೂ ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯನ್ನು ಹಿಡಿಯಲು ಬಾಣಸವಾಡಿ ಎಸಿಪಿ ರವಿಕುಮಾರ್ ನೇತೃತ್ವದ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು.

ಬೆಂಗಳೂರು(ಮೇ 11): ಹೆಚ್ಚೂಕಡಿಮೆ ಒಂದು ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ ರೌಡಿ ನಾಗ ಕೊನೆಗೂ ಅರೆಸ್ಟ್ ಆಗಿದ್ದಾನೆ. ಇಂದು ತಮಿಳುನಾಡಿನ ವೇಲೂರಿನಲ್ಲಿ ಬೆಂಗಳೂರು ಪೊಲೀಸರ ತಂಡವೊಂದು ನಾಗ ಹಾಗೂ ಆತನ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.

ಕೊನೆಯ ಕ್ಷಣಗಳು...
ಸುವರ್ಣನ್ಯೂಸ್'ಗೆ ಸಿಕ್ಕ ಮಾಹಿತಿ ಪ್ರಕಾರ, ಬಂಧನಕ್ಕೆ ಮುನ್ನ ಮಧ್ಯಾಹ್ನ 3:50ಕ್ಕೆ ನಾಗನ ಮಗ ಗಾಂಧಿಯು ನಾಗನ ವಕೀಲ ನರೇಶ್'ಗೆ ಫೋನ್ ಮಾಡಿದ್ದಾನೆ. ಪೊಲೀಸರು ಬರುತ್ತಿದ್ದಾರೆ, ಏನು ಮಾಡಲಿ ಎಂದು ಗಾಂಧಿ ಕೇಳುತ್ತಾನೆ. ಆಗ ವಕೀಲ ನರೇಶ್ ಅವರು ಪೊಲೀಸರಿಗೆ ಶರಣಾಗುವಂತೆ ಗಾಂಧಿಗೆ ಸೂಚಿಸುತ್ತಾರೆ. ಆದರೆ, ತಾವು ಸರೆಂಡರ್ ಆರೆ ಪೊಲೀಸರು ಸಾಯಿಸಿಬಿಡುತ್ತಾರೆ ಎಂದು ಭೀತಗೊಂಡು ಗಾಂಧಿಯು ಫೋನ್'ನಲ್ಲಿ ವಕೀಲರೊಂದಿಗೆ ಕಿರುಚಾಡಿದ್ದಾನೆ. ತಾವು ಪೊಲೀಸರಿಗೆ ಸಿಕ್ಕುವುದಿಲ್ಲ. ತಪ್ಪಿಸಿಕೊಳ್ಳುತ್ತೇವೆ ಎಂದು ಫೋನ್'ನಲ್ಲೇ ಹೇಳುತ್ತಾರೆ.