ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರೂ. ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡುವ ಅವಧಿ ಬುಧವಾರಕ್ಕೆ ಅಂತ್ಯಗೊಳ್ಳುತ್ತಿದ್ದು, ನಾಳೆಯಿಂದ ಸರ್ಕಾರಿ  ಕಚೇರಿಗಳಲ್ಲೂ ಹಳೆಯನೋಟುಗನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.

ನವದೆಹಲಿ(ನ.24): ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರೂ. ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಚಲಾವಣೆ ಮಾಡುವ ಅವಧಿ ಬುಧವಾರಕ್ಕೆ ಅಂತ್ಯಗೊಳ್ಳುತ್ತಿದ್ದು, ನಾಳೆಯಿಂದ ಸರ್ಕಾರಿ ಕಚೇರಿಗಳಲ್ಲೂ ಹಳೆಯನೋಟುಗನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರ ಸರ್ಕಾರ ಕಚೇರಿಗಳಾದ ಅಂಚೆಕಚೇರಿ, ಸರ್ಕಾರಿ ಆಸ್ಪತ್ರೆ, ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರಗಳು, ಹೆದ್ದಾರಿ ಟೋಲ್ ಕೇಂದ್ರ ಸೇರಿದಂತೆ ಇತರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕೇಂದ್ರಗಳಲ್ಲಿ ಹಳೆಯ ನೋಟುಗಳ ಚಲಾವಣೆಗೆ ಅನುವು ಮಾಡಿಕೊಟ್ಟಿತ್ತು. ನೀರಿನ ಬಿಲ್ ಪಾವತಿ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಇತರೆ ಬಿಲ್ ಗಳನ್ನು ಸರ್ಕಾರಿ ಕಚೇರಿಗಳಲ್ಲಿ ಪಾವತಿ ಮಾಡಲು ಅನುವು ಮಾಡಿಕೊಡಲಾಗಿತ್ತು. ಆದರೆ ಈ ಕಾಲಾವಧಿ ಇಂದಿಗೆ ಅಂತ್ಯವಾಗುತ್ತಿದ್ದು, ನಾಳೆಯಿಂದ ಎಲ್ಲ ಸರ್ಕಾರ ಕಚೇರಿಗಳಲ್ಲಿ ಹಳೆಯ ನೋಟು ಚಲಾವಣೆಯಾಗುವುದಿಲ್ಲ.

ಹಳೆಯ ನೋಟುಗಳ ಚಲಾವಣೆ ಇಂದಿಗೆ ಕೊನೆಯಾಗುವುದರಿಂದ ಜನತೆ ಕಂಗಾಲಾಗಾವುದು ಬೇಡ. ಏಕೆಂದರೆ ಹಳೆಯ ನೋಟುಗಳ ಚಲಾವಣೆ ರದ್ದಾಗಿದೆಯಾದರೂ, ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ತಮ್ಮ ತಮ್ಮ ಖಾತೆಗಳಲ್ಲಿ ಠೇವಣಿ ಮಾಡಬಹುದಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ಹಳೆಯ ನೋಟುಗಳನ್ನು ಠೇವಣಿ ಮಾಡುವ ಅವಧಿಯನ್ನು ಡಿಸೆಂಬರ್ 30ರವರೆಗೂ ವಿಸ್ತರಿಸಿದ್ದು, ಅಲ್ಲಿಯವರೆಗೂ ಜನರು ತಮ್ಮಲ್ಲಿರುವ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಬಹುದಾಗಿದೆ.

ಎಲ್ಲೆಲ್ಲಿ ಹಳೆ ನೋಟು ಬದಲಾವಣೆ?

1. ಪೆಟ್ರೋಲ್ ಬಂಕ್ ಗಳು

2. ರೈಲ್ವೇ ಟಿಕೆಟ್ ಬುಕ್ಕಿಂಗ್

3. ಸಾರಿಗೆ ಇಲಾಖೆ (ಬಸ್ ಮತ್ತು ಇತರೆ ಸರ್ಕಾರಿ ಸಾರಿಗೆ ಸೇವೆ-ಬಸ್ ಟಿಕೆಟ್ ಬುಕ್ಕಿಂಗ್)

4.ಸರ್ಕಾರಿ ಆಸ್ಪತ್ರೆಗಳು

5. ವಿಮಾನ ಟಿಕೆಟ್ ಬುಕ್ಕಿಂಗ್

6. ಶವಾಗಾರಗಳು, ಚಿತಾಗಾರ ಮತ್ತು ಸ್ಮಶಾನಗಳು

7. ಹಾಲಿನ ಕೇಂದ್ರಗಳು

8.ಮೆಟ್ರೋ ರೈಲು ನಿಲ್ದಾಣ

9. ಮೆಡಿಕಲ್ ಕೇಂದ್ರ (ವೈದ್ಯರು ಸೂಚಿಸಿದ ಔಷಧಿಕೊಳ್ಳಲು ಮಾತ್ರ)

10.ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಕೇಂದ್ರ

11. ರೈಲ್ವೇ ಕ್ಯಾಟರಿಂಗ್ (ರೈಲುಗಳಲ್ಲಿ ಆಹಾರಕೊಳ್ಳಲು)

12.ನೀರು ಮತ್ತು ವಿದ್ಯುತ್ ಬಿಲ್ ಪಾವತಿ ಕೇಂದ್ರಗಳು

13. ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗಾಗಿ ಟಿಕೆಟ್

14. ಸರ್ಕಾರಿ ಗ್ರಾಹಕ ಸಹಕಾರಿ ಕೇಂದ್ರಗಳು (ಹಾಪ್ ಕಾಮ್ಸ್, ಎಂಎಸ್ ಐಎಲ್, ಸರ್ಕಾರಿ ಖಾದಿ ಬಂಡಾರ ಇತ್ಯಾದಿ)

15.ಸರ್ಕಾರೀ ಆದಾಯ ತೆರಿಗೆ ಇಲಾಖೆ ಮತ್ತು ಕಂದಾಯ ಇಲಾಖೆ

16. ಬಿತ್ತನೆ ಬೀಜ ಮತ್ತು ಕೃಷಿಕ ವಸ್ತುಗಳ ಸರ್ಕಾರಿ ಕೇಂದ್ರ ಇತ್ಯಾದಿ