ನವದೆಹಲಿ(ಜ.16): ಫಾಸ್ಟ್‌ಟ್ಯಾಗ್‌ ಇಲ್ಲದವರಿಗೆ ಕೇಂದ್ರ ಸಿಹಿ ಸುದ್ದಿ ನೀಡಿದೆ. ಫಾಸ್ಟ್ ಟ್ಯಾಗ್ ಇಲ್ಲದವರರಿಗೆ ಗುಡ್‌ ನ್ಯೂಸ್ ನೀಡಿದ ಕೇಂದ್ರ ಸರ್ಕಾರ ಹೊಸ ಆದೇಶ ನೀಡಿದೆ. 

ಫಾಸ್ಟ್ ಟ್ಯಾಗ್ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಹೊಸ ಆದೇಶ ಬಂದಿದ್ದು, ದೇಶದ 65 ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಇಲ್ಲದಿದ್ದರೂ ನೀವಿನ್ನು ಸಂಚರಿಸಬಹುದು. ಕೇಂದ್ರ ಸರ್ಕಾರ ದೇಶದ 65 ಟೋಲ್‌ಗಳಿಗೆ 30 ದಿನಗಳ ಕಾಲಾವಕಾಶ ಹೆಚ್ಚಿಸಿದೆ.

ಫಾಸ್ಟ್ ಟ್ಯಾಗ್ ಖಾತೆಯಿಂದ ಹೋಯ್ತು 600 ರೂ; ಯಾರಿಗೆ ಹೇಳೋಣ ಪ್ಲಾಬ್ಲೆಮ್?

ಕರ್ನಾಟಕದಲ್ಲಿ ಏರ್ಪೋರ್ಟ್ ಟೋಲ್(ಸಾದಹಳ್ಳಿ) ,ಎಲೆಕ್ಟ್ರಾನಿಕ್ ಸಿಟಿ ಟೋಲ್, ನೆಲಮಂಗಲ , ಹೊಸಕೋಟೆ ಟೋಲ್ಗಳಲ್ಲಿ ಈ ಅವಕಾಶ ಇರಲಿದೆ. 65 ಟೋಲ್ ಗಳಲ್ಲಿ ಸಂಚಾರಿಸುವ ವಾಹನಗಳಿಗೆ ಹೊಲ್ಸೇಲ್ ದರ ನೀಡಲು ತೀರ್ಮಾನ ಮಾಡಲಾಗಿದೆ.

ಇನ್ನುಳಿದ ಟೋಲ್‌ಗಳಿಗೆ ಕೇಂದ್ರ ಸರ್ಕಾರದ ಈ ನಿಯಮ ಅನ್ವಯವಾಗಲ್ಲ. ಇತರ ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ಹೊಲ್ಸೇಲ್‌ ದರ ಅನ್ವಯಿಸುವುದಿಲ್ಲ. ಡಿ.01 2019 ರಿಂದ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಹಣ ನೀಡಬೇಕೆಂದು ಕೇಂದ್ರ ಸರ್ಕಾರ ತಿಳಿಸಿತ್ತು.

ವಾಹನ ಸವಾರರೇ ಎಚ್ಚರ : ಡಬಲ್ ಹಣ ಕಟ್ಬೇಕಾಗುತ್ತೆ !

ಫಾಸ್ಟ್ಟ್ಯಾಗ್ ಇಲ್ಲದಿದ್ರೆ ಆಪ್ ಅಂಡ್ ಡೌನ್‌ಗೆ ರಿಯಾಯಿತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಸದ್ಯ ದೇಶದ 65 ಟೋಲ್‌ಗಳಲ್ಲಿ ಕಾಲಾವಕಾಶವನ್ನು ಹೆಚ್ಚಿಸಲಾಗಿದೆ.