Asianet Suvarna News Asianet Suvarna News

'ಮೋದಿ ಹಾಗೂ ಅಮಿತ್ ಶಾರವರೇ, ನಿಮ್ಮ ಸೊಕ್ಕನ್ನು ಮುರಿದೇ ತೀರುತ್ತೇನೆ'

ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರಣ ಎಂದು ಲಾಲು ಪ್ರಸಾದ್ ಯಾದವ್ ಕಿಡಿ ಕಾರಿದ್ದಾರೆ.

Lalu Yadav tears into PM Modi  Amit Shah says will break their arrogance
  • Facebook
  • Twitter
  • Whatsapp

ಪಟ್ನಾ (ಜು.07): ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರಣ ಎಂದು ಲಾಲು ಪ್ರಸಾದ್ ಯಾದವ್ ಕಿಡಿ ಕಾರಿದ್ದಾರೆ.

ನಮ್ಮ ಪಕ್ಷದ ಮೈತ್ರಿಯೊಳಗೆ ಮೂಗು  ತೂರಿಸಲು ಪ್ರಯತ್ನಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷವನ್ನೇ ಇಲ್ಲವಾಗಿಸಿ ಬಿಡುತ್ತೇನೆ.  ಪ್ರಧಾನಿ ಮೋದಿಯವರ ಸೊಕ್ಕನ್ನು ಮುರಿಯಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಲಾಲು ಸವಾಲು ಹಾಕಿದ್ದಾರೆ.

ಆರ್’ಜೆಡಿ ಮತ್ತು ಜೆಡಿಯು ಮೈತ್ರಿಯನ್ನು ಮುರಿಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ನಮ್ಮ ಪಕ್ಷದ ಮೈತ್ರಿಯೊಳಗೆ ಮೂಗು ತೂರಿಸಲು ಪ್ರಯತ್ನಿಸಿದ್ದಕ್ಕಾಗಿ ಕೇಸರಿ ಪಕ್ಷವನ್ನೇ ಇಲ್ಲವಾಗಿಸಿ ಬಿಡುತ್ತೇವೆ. ನಾನು ನಿಮ್ಮನ್ನು (ಮೋದಿಯವರನ್ನು) ಬಿಹಾರದಿಂದ ಓಡಿಸಿದ್ದೇನೆ.  ಕೇಳಿ, ಮೋದಿ ಹಾಗೂ ಅಮಿತ್ ಶಾ ಅವರೇ, ನಾನು ಮತ್ತು ಜನರು ಸೇರಿ ನಿಮ್ಮ ಸೊಕ್ಕನ್ನು ಮುರಿಯುತ್ತೇವೆ. ನನಗೆ ಗಲ್ಲುಶಿಕ್ಷೆಯಾದರೂ ಪರವಾಗಿಲ್ಲ, ನಿಮ್ಮ ಸೊಕ್ಕನ್ನು ಮುರಿದೇ ತೀರುತ್ತೇನೆ ಎಂದು ಲಾಲು ಹೇಳಿದ್ದಾರೆ.

 

 

Follow Us:
Download App:
  • android
  • ios