2019 ರ ಲೋಕಸಭಾ ಚುನಾವಣೆಯಲ್ಲಿ ಆರ್ ಜೆಡಿ ಪಕ್ಷದಿಂದ ಐಶ್ವರ್ಯ ರೈ ಸ್ಪರ್ಧಿಸುತ್ತಿದ್ದಾರೆ. ಅರೆ! ಅಮಿತಾಬ್ ಸೊಸೆ, ಮಾಜಿ ಭುವನ ಸುಂದರಿ ಆರ್ ಜೆಡಿ ಪಕ್ಷ ಸೇರಿದ್ದು ಯಾವಾಗ ಎಂದು ಹುಬ್ಬೇರಿಸಬೇಡಿ. ಲೋಕಸಭೆ ಚುನಾವಣೆಗೆ ನಿಲ್ಲುತ್ತಿರುವದು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಸೊಸೆ ಐಶ್ವರ್ಯ ರೈ ಅವರು.

ಪಾಟ್ನಾ(ಮೇ.27): 2019 ರ ಲೋಕಸಭಾ ಚುನಾವಣೆಯಲ್ಲಿ ಆರ್ ಜೆಡಿ ಪಕ್ಷದಿಂದ ಐಶ್ವರ್ಯ ರೈ ಸ್ಪರ್ಧಿಸುತ್ತಿದ್ದಾರೆ. ಅರೆ! ಅಮಿತಾಬ್ ಸೊಸೆ, ಮಾಜಿ ಭುವನ ಸುಂದರಿ ಆರ್ ಜೆಡಿ ಪಕ್ಷ ಸೇರಿದ್ದು ಯಾವಾಗ ಎಂದು ಹುಬ್ಬೇರಿಸಬೇಡಿ. ಲೋಕಸಭೆ ಚುನಾವಣೆಗೆ ನಿಲ್ಲುತ್ತಿರುವದು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಸೊಸೆ ಐಶ್ವರ್ಯ ರೈ ಅವರು.

ಆರ್ ಜೆಡಿಯಿಂದ ಈ ಬಗ್ಗೆ ಅಧಿಕೃತ ಹೇಳಿಕೆಗೂ ಮುನ್ನವೇ ಜೆಡಿಯು ತನ್ನ ಮಾಜಿ ಮಿತ್ರ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಆರ್ ಜೆಡಿ ಕಾರ್ಯಕರ್ತರು ಕೇವಲ ಡ್ರಮ್ ಭಾರಿಸುವುದಕ್ಕಷ್ಟೇ ಸೀಮಿತ, ಚುನಾವಣೆಗೆ ಸ್ಪರ್ಧಿಸುವುದಕ್ಕೆ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಸದಸ್ಯರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ ಎಂದು ಟೀಕಿಸಿದೆ.

ತೇಜ್ ಪ್ರತಾಪ್ ಯಾದವ್ ಅವರ ಪತ್ನಿ ಐಶ್ವರ್ಯ ರೈ ಲೋಕಸಭಾ ಚುನವಾಣೆಗೆ ಸ್ಪರ್ಧಿಸುವುದರ ಬಗ್ಗೆ ಆರ್ ಜೆಡಿ ಇನ್ನಷ್ಟೇ ತನ್ನ ನಿರ್ಧಾರವನ್ನು ಪ್ರಕಾಟಿಸಬೇಕಿದೆ. ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯ ಅವರ ವಿವಾಹ ಮೇ.12 ರಂದು ನಡೆದಿತ್ತು.